

ಕಂಪ್ಲಿ ನಡುವಿನ ಮಸೀದಿಯಿಂದ ಜೋಗಿ ಕಾಲುವೆತನಕದ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ರಸ್ತೆಗೆ ಡಾಂಬರ್ ಹಾಕದ ಹಿನ್ನೆಲೆಯಲ್ಲಿ ಧೂಳು ಮನೆಯೊಳಗೆ ಆವರಿಸುತ್ತಿದೆ. ಜನರ ತಾಳ್ಮೆ ಪರೀಕ್ಷಿಸದೆ ಕೂಡಲೆ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು.
ಕಂಪ್ಲಿ ನಡುವಿನ ಮಸೀದಿಯಿಂದ ಜೋಗಿ ಕಾಲುವೆ ಮಾರ್ಗದಲ್ಲಿ ಬೀದಿ ದೀಪ ಹಾಕಲಾಗುತ್ತಿದ್ದು, ನಂತರ ರಸ್ತೆ ಡಾಂಬರೀಕಣ ಕಾಮಗಾರಿ ಕೈಗೊಳ್ಳಲಾಗುವುದು. 15 ದಿನಗಳಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳಿಸಲಾಗುವುದು. ನಂ.10 ಮುದ್ದಾಪುರ ಗ್ರಾಮದಿಂದ ಸಿದ್ಧೇಶ್ವರ ಕ್ರಾಸ್‌ತನಕ ಎರಡು ಕಿ.ಮೀ.ರಸ್ತೆಯನ್ನು ಸುಮಾರು ನಾಲ್ಕು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ವಾಲ್ಮೀಕಿ ವೃತ್ತದಿಂದ ಕಾರ್ಖಾನೆವರೆಗಿನ ರಸ್ತೆ ವಿಸ್ತರಣೆಯಾಗಬೇಕಿದೆ. ರಸ್ತೆಯ ಎರಡೂ ಬದಿಗೆ ಚರಂಡಿ ನಿರ್ಮಿಸಲು ಸ್ಥಳ ನಿಗದಿಪಡಿಸುವಂತೆ ತಹಸೀಲ್ದಾರ್‌ಗೆ ಪತ್ರ ಬರೆಯಲಾಗಿದೆ. ಚರಂಡಿ ನಿರ್ಮಿಸಿದ ನಂತರ ರಸ್ತೆ ಡಾಂಬರೀಕರಣ ಕೈಗೊಳ್ಳಲಾಗುವುದು.