ನಗರದ ಮಹಾದೇವ ತಾತನ ಮಠದ ಬಳಿ ಹಾಗೂ ಕುರುಗೋಡು ತಾಲೂಕಿನ ಬಾದನಹಟ್ಟಿಯ ಮಾರೆಮ್ಮ ಗುಡಿ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಜೂಜಾಟ ಆಡುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿ ನಾಲ್ವರು ವಶಕ್ಕೆ ಪಡೆದು, 9500 ರೂ. ಹಣ ಜಪ್ತಿ ಮಾಡಲಾಗಿದೆ. ಸಿರಗುಪ್ಪ ಪಟ್ಟಣದ ಸ್ಮಶಾನದ ಡಬ್ಬಿ ಅಂಗಡಿ, ತಾಲೂಕಿನ ಚಾನಾಳ್ ಕ್ರಾಸ್ ಬಳಿಯ ಅಂಗಡಿಯಲ್ಲಿ ದಾಳಿ ನಡೆಸಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದು, 1580 ರೂ. ಮೌಲ್ಯದ 3.33 ಲೀ. ಮದ್ಯ ಜಪ್ತಿಗೊಳಿಸಲಾಗಿದೆ. ತಾಲೂಕಿನ ಹಗರಿ ನದಿಯಿಂದ ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿದ್ದ ಎರಡು ಟನ್ ಮರಳು, ಒಂದು ಟ್ರಾೃಕ್ಟರ್ ಹಾಗೂ ಒಬ್ಬ ಆರೋಪಿಯನ್ನು ವಶಕ್ಕೆ ಪಡೆದು ಆಯಾ ಸಂಬಂಧಪಟ್ಟ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.