ಹೆಚ್ಚು ಪಾಲಿಸಿ ಮಾಡಿಸಿದರೆ ಪ್ರಶಸ್ತಿ

ಹರಪನಹಳ್ಳಿಯ ಜೀವ ವಿಮಾ ಸಲಹೆಗಾರರ ವೆಲ್ಫೇರ್ ಅಸೋಸಿಯೇಷನ್ ಶಾಖಾ ಕಚೇರಿಯಲ್ಲಿ 15ನೇ ಸಂಸ್ಥಾಪನಾ ದಿನ ಕಾರ್ಯಕ್ರಮವನ್ನು ರಾಯಚೂರು ವಿಭಾಗೀಯ ಅಧ್ಯಕ್ಷ ಹೇಮಪ್ಪ ಬಿ ಮೋರಿಗೇರಿ ಉದ್ಘಾಟಿಸಿದರು. ಶಾಖಾಧಿಕಾರಿ ರಾಜೇಶ್, ಉಪಶಾಖಾಧಿಕಾರಿ ಸುರೇಶ್ ರೆಡ್ಡಿ, ಆಡಳಿತಧಿಕಾರಿ ಕೆ.ಎಚ್.ಬಸವರಾಜ್, ವಿಮಾ ನೌಕರರ ಸಂಘದ ಅಧ್ಯಕ್ಷ ಹನುಮಂತಪ್ಪ, ಪದಾಧಿಕಾರಿಗಳಾದ ನಾಗನಗೌಡ, ವಿ.ಎಚ್.ಚರಂತಿಮಠ, ಎಂ.ಅಂಬಣ್ಣ, ಎಲ್‌ಐಸಿ ಅಧಿಕಾರಿಗಳಾದ ವೆಂಕಟೇಶ್, ಹಿಮಾಂಶು, ಗುರುರಾಜ್, ಎಸ್.ಎಂ.ವೀರಯ್ಯ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ರಾಯಚೂರು ವಿಭಾಗೀಯ ಅಧ್ಯಕ್ಷ ಹೇಮಪ್ಪ ಬಿ.ಮೋರಿಗೇರಿ ಹೇಳಿಕೆ

ಹರಪನಹಳ್ಳಿ: 15 ವರ್ಷಗಳಿಂದ ಸಿಡಬ್ಲುೃಎ ಸಂಘಟನೆ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ರಾಯಚೂರು ವಿಭಾಗೀಯ ಅಧ್ಯಕ್ಷ ಹೇಮಪ್ಪ ಬಿ.ಮೋರಿಗೇರಿ ತಿಳಿಸಿದರು.

ಶಾಖಾ ಕಚೇರಿಯಲ್ಲಿ ಜೀವ ವಿಮಾ ಸಲಹೆಗಾರರ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಸೋಮವಾರ 15ನೇ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶಾದ್ಯಂತ ಸಿಡಬ್ಲುೃಎ ಸಂಘಟನೆ ಜನರಿಗೆ ಸಾಕಷ್ಟು ಸೇವೆ ನೀಡಿ ನಾಗಲೋಟವನ್ನು ಮುಂದುವರಿಸಿದೆ. ಅತೀ ಹೆಚ್ಚು ಪಾಲಿಸಿ ಮಾಡಿಸಿದ 3 ಜನರಿಗೆ ನೀಲೇಶ್ ಸಾಥಿ ಪ್ರಶಸ್ತಿ, ಜಗದೀಶ್ ಜಾವರ್ ಪ್ರಶಸ್ತಿ ಹಾಗೂ ಬಿ. ನರಸಿಂಹಯ್ಯ ಪ್ರಶಸ್ತಿ ನೀಡಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net