ಬಿಎಲ್‌ಒಗಳ ಕಾರ್ಯವೈಖರಿ ಪರಿಶೀಲನೆ

ಕಂಪ್ಲಿಯಲ್ಲಿ ಮತದಾರರ ಮನೆಗೆ ಭೇಟಿ ನೀಡಿ ಎನ್ಯುಮರೇಷನ್ ಅರ್ಜಿ ವಿತರಿಸಲಾಯಿತು.
ಕಂಪ್ಲಿಯಲ್ಲಿ ಮತದಾರರ ಮನೆಗೆ ಭೇಟಿ ನೀಡಿ ಎನ್ಯುಮರೇಷನ್ ಅರ್ಜಿ ವಿತರಿಸಲಾಯಿತು.
Published on
ಕಂಪ್ಲಿ: ಬಿಎಲ್‌ಒಗಳು ಮನೆ ಮನೆಗೆ ತೆರಳಿ ಗಣತಿ ನಮೂನೆ ಕೊಡುವುದನ್ನು ಖಾತ್ರಿ ಪಡಿಸಿಕೊಳ್ಳುತ್ತಿದ್ದೇನೆ ಎಂದು ತಹಸೀಲ್ದಾರ್ ಜೂಗಲ ಮಂಜುನಾಯಕ ತಿಳಿಸಿದರು.
ತೆಗ್ಗಿನಮಠ ಪ್ರದೇಶದಲ್ಲಿ ಬಿಎಲ್‌ಒ ಮನೆ ಮನೆಗೆ ತೆರಳಿ ಗಣತಿ ನಮೂನೆ ಕೊಡುವುದನ್ನು ಪರಿಶೀಲಿಸಿ ಮಾತನಾಡಿದರು. ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆಗಾಗಿ ಬಿಎಲ್‌ಒಗಳು ಮನೆಮನೆಗೆ ತೆರಳಿಗೆ ಗಣತಿ ನಮೂನೆ ಕೊಡುತ್ತಿದ್ದಾರೆ. ನೆಟ್‌ವರ್ಕ್, ಸರ್ವರ್ ತೊಂದರೆ ಮೊದಲಾದ ಸಮಸ್ಯೆಗಳನ್ನು ಗಮನಿಸಲಾಗಿದೆ ಎಂದರು.
ಈಗಾಗಲೇ ಮ್ಯಾಪಿಂಗ್ ಆಗಿದ್ದು, ಗಣತಿ ನಮೂನೆ ವಿತರಿಸಿ ಡಿಜಿಟಲೈಜೇಷನ್ ಮಾಡಲಾಗುತ್ತಿದೆ. ಬಿಎಲ್‌ಒಗಳ ಕಾರ್ಯವೈಖರಿ ಪರಿಶೀಲಿಸಲಾಗುತ್ತಿದೆ. ಎಸ್‌ಐಆರ್ ಪ್ರಕ್ರಿಯೆಯನ್ನು ಯಾವ ದೋಷ ಇಲ್ಲದಂತೆ ಸುಸೂತ್ರವಾಗಿ ನೆರವೇರಿಸಲು ತಕ್ಕ ಕ್ರಮ ಕೈಗೊಂಡಿದೆ ಎಂದರು.
ಜಿಲ್ಲಾಧಿಕಾರಿ ಕಚೇರಿ ಚುನಾವಣಾ ವಿಷಯ ನಿರ್ವಾಹಕ ಎ.ನಿರಂಜನಮೂರ್ತಿ, ಬಿಎಲ್‌ಒ ಗಂಗಮ್ಮ, ಗ್ರಾಮ ಆಡಳಿತಾಧಿಕಾರಿ ವಮ್ಮಾರಿ ರಮೇಶ್, ಎಸ್‌ಡಿಎ ಸುರೇಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net