ಏಳು ತಿಂಗಳ ಹಿಂದೆ ನಾಡದೋಣಿಗೆ ರಧ್ರಬಿದ್ದ ಪರಿಣಾಮ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ ಗದಗ, ವಿಜಯನಗರ ಹಾಗೂ ಹಾವೇರಿ ಜಿಲ್ಲೆಗಳ ಜನರಿಗೆ ಜಲಮಾರ್ಗ ಸಂಚಾರ ಬಂದ್ ಆಗಿತ್ತು. ಈ ಕುರಿತು ವಿಜಯವಾಣಿ ಪತ್ರಿಕೆಯಲ್ಲಿ 2026ರ ಜು.22ರಂದು ಮಿನಿ ಎಲ್‌ಸಿಟಿ 6 ತಿಂಗಳಿಂದ ಬಂದ್ ಮತ್ತು 2026ರ ಜ.23ರಂದು ‘ನಾಡದೋಣಿಗೆ ರಂಧ್ರ ಪ್ರಯಾಣಕ್ಕೆ ಅರ್ಧ ಚಂದ್ರ’ ಶೀರ್ಷಿಕೆಯಡಿ ನಿರಂತರ ವಿಶೇಷ ವರದಿ ಪ್ರಕಟಿಸಿ ಅಧಿಕಾರಿಗಳ ಗಮನ ಸೆಳೆಯಲಾಗಿತ್ತು.