ವಿದ್ಯುತ್ ಸಂಪರ್ಕ ಕಲ್ಪಿಸಲು ಮನವಿ

  ಚಿರಿಬಿ ಗ್ರಾಮದ ಅಂಬೇಡ್ಕರ್ ಕಾಲನಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಜೆಸ್ಕಾಂ ಜೆಇ ನಾಗರಾಜಗೆ ಮನವಿ ಸಲ್ಲಿಸಲಾಯಿತು. ವಕೀಲ ಪ್ರಕಾಶ, ಗ್ರಾಪಂ ಮಾಜಿ ಉಪಾಧ್ಯಕ್ಷ ಚಿನ್ಮಯಾನಂದಸ್ವಾಮಿ ಇದ್ದರು.
ಚಿರಿಬಿ ಗ್ರಾಮದ ಅಂಬೇಡ್ಕರ್ ಕಾಲನಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಜೆಸ್ಕಾಂ ಜೆಇ ನಾಗರಾಜಗೆ ಮನವಿ ಸಲ್ಲಿಸಲಾಯಿತು. ವಕೀಲ ಪ್ರಕಾಶ, ಗ್ರಾಪಂ ಮಾಜಿ ಉಪಾಧ್ಯಕ್ಷ ಚಿನ್ಮಯಾನಂದಸ್ವಾಮಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜೆಸ್ಕಾಂ ಜೆಇಗೆ ಚಿರಿಬಿ ಅಂಬೇಡ್ಕರ್ ಕಾಲನಿ ನಿವಾಸಿಗಳ ಮನವಿ
ಕೊಟ್ಟೂರು: ಚಿರಿಬಿ ಗ್ರಾಮದ ಅಂಬೇಡ್ಕರ್ ಕಾಲನಿ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಒತ್ತಾಯಿಸಿ ಜೆಸ್ಕಾಂ ಜೆಇ ನಾಗರಾಜಗೆ ಕಾಲನಿ ನಿವಾಸಿಗಳು ಮನವಿ ಸಲ್ಲಿಸಿದರು.
ಕಾಲನಿ ನಿವಾಸಿ, ವಕೀಲ ಎ.ಕೆ.ಪ್ರಕಾಶ ಮಾತನಾಡಿ, ಕಾಲನಿಯಲ್ಲಿ 25ರಿಂದ 30 ಮನೆಗಳಿದ್ದು, 100 ಕ್ಕೂ ಹೆಚ್ಚು ಜನರು 25 ವರ್ಷಗಳಿಂದ ವಾಸವಾಗಿದ್ದಾರೆ. ಕಾಲನಿಗೆ ವಿದ್ಯುತ್ ಸಂಪರ್ಕ ಇಲ್ಲದೆ ಜನರು ಕತ್ತಲಲ್ಲಿ ಜೀವನ ನಡೆಸಬೇಕಾಗಿದೆ. ಟಿಸಿ ವ್ಯವಸ್ಥೆ ಕೈಗೊಂಡು ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ವಿದ್ಯುತ್ ಇಲಾಖೆಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ವಿಷ ಜಂತುಗಳ ಭಯದಲ್ಲಿ ಜನರು ರಾತ್ರಿ ವೇಳೆ ಮೂತ್ರ, ಮಲ ವಿಸರ್ಜನೆಗೆ ಹೊರಗೆ ಬರಲು ಭಯಪಡುತ್ತಿದ್ದಾರೆ ಎಂದರು.
ಗ್ರಾಮಸ್ಥರ ಪರದಾಟ: ಗ್ರಾಮದ ಸಮಸ್ಯೆ ಕುರಿತು ಮನವಿ ಸಲ್ಲಿಸಲು ತಾಪಂ ಕಚೇರಿಗೆ ಬಂದಿದ್ದ ಗ್ರಾಮಸ್ಥರು ಪರದಾಡಬೇಕಾಯಿತು. ಇಒ ಮತ್ತು ಎಡಿ ಕಚೇರಿಯಲ್ಲಿ ಇಲ್ಲದ ಕಾರಣ ಗ್ರಾಮಸ್ಥರು ತಾಪಂ ವ್ಯವಸ್ಥಾಪಕಗೆ ಮನವಿ ಸ್ವೀಕರಿಸುವಂತೆ ಕೋರಿದರು. ಅದಕ್ಕೆ ಪ್ರತಿಕ್ರಿಯಿಸಿದ ವ್ಯವಸ್ಥಾಪಕ, ಮನವಿ ಸ್ವೀಕರಿಸುವುದಿಲ್ಲ ಎಂದರು. ಇಒ ಅವರನ್ನು ಸಂಪರ್ಕಿಸಿ ಅವರಿಗೆ ಸಲ್ಲಿಸಿ ಎಂದರು.
ಆಗ ವಕೀಲ ಪ್ರಕಾಶ ಮನವಿ ಸ್ವೀಕರಿಸದಿದ್ದರೆ ಇಒ ಬರುವವರೆಗೆ ಪಂಚಾಯಿತಿಗೆ ಬೀಗ ಹಾಕಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಗ ಕಚೇರಿ ಕೆಲಸದ ನಿಮಿತ್ತ ತೆರಳಿದ್ದ ಇಒ ಡಾ.ಬಿ.ಆನಂದ ಕುಮಾರ್ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net