ರಾಜ್ಯದಲ್ಲಿ ಸಿದ್ದರಾಮಯ್ಯ ಅಥವಾ ಡಿ.ಕೆ. ಶಿವಕುಮಾರ್ ಅವರಲ್ಲಿ ಯಾರು ಮುಖ್ಯಮಂತ್ರಿ ಎಂಬುದು ಜನರಿಗೆ ತಿಳಿಯುತ್ತಿಲ್ಲ. ಇದೊಂದು ಕೊಲೆಗಡುಕ ಸರ್ಕಾರವಾಗಿದೆ. ನ್ಯಾಯ ಕೇಳಲು ಇಲ್ಲಿಗೆ ಬಂದಿದ್ದೇವೆ, ಬಳ್ಳಾರಿ ಸುಡುತ್ತೇನೆ ಎಂಬುವವರಿಗೆ ಡಿಸಿಎಂ ಡಿ.ಕೆ. ಶಿವಕುಮಾರ ಬೆಂಬಲ ನೀಡುತ್ತಿದ್ದಾರೆ. ಮಂಗಳೂರಿನಲ್ಲಿ ಬಾಂಬ್ ಹಾಕಿದವ, ಸರ್ಕಾರಿ ಅಧಿಕಾರಿ ನಿಂದಿಸಿದವರನ್ನು ’ಬ್ರದರ್’ ಎನ್ನುತ್ತಾರೆ. ಡಿಸಿಎಂ ಸ್ಥಾನ ಸಾಂವಿಧಾನಿಕ ಹುದ್ದೆಯಲ್ಲ. ಆದರೆ, ಈ ಪ್ರಕರಣದಲ್ಲಿ ಗೃಹ ಸಚಿವರು ಸಚಿವರು ಅಧಿಕಾರಿಗಳೊಂದಿಗೆ ನಡೆಸಬೇಕಾದ ಸಭೆಯನ್ನು ಡಿ.ಕೆ.ಶಿವಕುಮಾರ ನಡೆಸಿದ್ದಾರೆ. ಅವರ ಇಲಾಖೆಯ ಕಾರ್ಯ ನಿರ್ವಹಿಸಲೇ ಬರುವುದಿಲ್ಲ, ಬೇರೆ ಇಲಾಖೆಯ ಕಾರ್ಯ ನಿರ್ವಹಿಸಲು ಹೊರಟಿದ್ದಾರೆ. ಕಾಂಗ್ರೆಸ್ ಸರ್ಕಾರದ ಆಯಸ್ಸು ಕೇವಲ ಎರಡು ವರ್ಷ ಮಾತ್ರಯಿದೆ. ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರ ಬೆನ್ನಿಗೆ ಬಿಜೆಪಿ ಸದಾ ಇರಲಿದೆ. ಈ ಪ್ರಕರಣ ಹಳ್ಳ ಹಿಡಿಸದೆ ಕಾರ್ಯಕರ್ತರಿಗೆ ನ್ಯಾಯ ಕೊಡಿಸುವವರೆಗೂ ಹೋರಾಟ ನಿಲ್ಲದು ಎಂದರು.