ಹಗರಿಬೊಮ್ಮನಹಳ್ಳಿ ತಹಸೀಲ್ದಾರ್ ಆರ್.ಕವಿತಾಗೆ ಹಿಂದೂ ಜನಜಾಗೃತಿ ಸಮಿತಿ ತಾಲೂಕು ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಸಂಚಾಲಕಿ ಪೂಜಾ, ಬಸವರಾಜ ಅಕ್ಕಿ, ಮಲ್ಲಣ್ಣ, ಅಂಗಡಿ ಮಂಜುನಾಥ ಇತರರಿದ್ದರು.
ಹಗರಿಬೊಮ್ಮನಹಳ್ಳಿ: ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ಹಿಂದೂ ವಿದ್ಯಾರ್ಥಿಗಳ ಜನಿವಾರ ಬಲವಂತವಾಗಿ ತೆಗೆಯಿಸುವುದು, ವಿವಾಹಿತ ಹಿಂದೂ ಮಹಿಳೆಯರ ಮಂಗಳಸೂತ್ರ, ಕಾಲುಂಗುರ, ಮೂಗುತಿ, ಕಿವಿಯೋಲೆ, ಕೈದಾರ ಮುಂತಾದ ಧಾರ್ಮಿಕ ಧಾರಣೆ ಸೂಚಕಗಳನ್ನು ತೆಗೆಯಲು ಒತ್ತಾಯಿಸುವುದಕ್ಕೆ ಹಿಂದೂ ಜನಜಾಗೃತಿ ಸಮಿತಿ ಖಂಡಿಸಿ, ತಹಸೀಲ್ದಾರ್ ಆರ್.ಕವಿತಾಗೆ ಮನವಿ ಸಲ್ಲಿಸಿತು.
ಸಮಿತಿ ಸಂಚಾಲಕಿ ಪೂಜಾ ಮಾತನಾಡಿ, ಬೆಂಗಳೂರಿನ ಮಡಿವಾಳ ಖಾಸಗಿ ಕಾಲೇಜಿನ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳ ತಪಾಸಣೆ ನೆಪದಲ್ಲಿ ಧಾರ್ಮಿಕ ಆಚರಣೆ ಧಾರಣೆ ತೆಗೆಸಿರುವುದು ಕಾನೂನು ಬಾಹಿರವಾಗಿದ್ದು, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.
ಸಮಿತಿ ಪ್ರಮುಖ ಬಸವರಾಜ ಅಕ್ಕಿ ಮಾತನಾಡಿ, ಶಿಕ್ಷಣ ಜಾಗೃತಿ ಹೆಸರಿನಲ್ಲಿ ಹಿಂದೂ ಧಾರ್ಮಿಕ ಆಚರಣೆಗಳಿಗೆ ಅವಮಾನಿಸುವುದು ಪ್ರಜಾಪ್ರಭುತ್ವದ ಆತ್ಮಕ್ಕೆ ವಿರುದ್ಧವಾಗಿದೆ ಎಂದರು.