ಭೌತಿಕ ಬದುಕಿಗೆ ಧರ್ಮಪ್ರಜ್ಞೆ ಅವಶ್ಯ

ಮಾನಿಹಳ್ಳಿ ಪುರವರ್ಗ ಮಠದಲ್ಲಿ ಶನಿವಾರ ಧರ್ಮ ಜಾಗೃತಿ ಕಾರ್ಯಕ್ರಮವನ್ನು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಉದ್ಘಾಟಿಸಿದರು. ಡಾ. ಮಳೆಯೋಗೀಶ್ವರ ಸ್ವಾಮೀಜಿ, ವರಸದ್ಯೋಜಾತ ಶಿವಾಚಾರ್ಯರು, ಶಿವಯೋಗಿ ಹಾಲಸ್ವಾಮೀಜಿ ಹಾಗೂ ಇತರರಿದ್ದರು.

Published on
ಹೂವಿನಹಡಗಲಿ: ಪ್ರಸ್ತುತ ಭೌತಿಕ ಬದುಕಿಗೆ ಧರ್ಮಪ್ರಜ್ಞೆ ಅತ್ಯವಶ್ಯ. ಸಮಾಜ ಸಂಘಟನೆ, ಜಾತಿ ಮತ್ತು ಧರ್ಮದ ವಿಚಾರಗಳು ಅತಿರೇಕಕ್ಕೆ ಹೋಗಬಾರದು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ಮಾನಿಹಳ್ಳಿ ಪುರವರ್ಗ ಮಠದಲ್ಲಿ ಶನಿವಾರ 14ನೇ ವರ್ಷದ ಮರುಳ ಸಿದ್ಧೇಶ್ವರ ಜಾತ್ರಾ ಮಹೋತ್ಸವ ಹಾಗೂ ಧರ್ಮ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಧರ್ಮಾಚರಣೆ ಮಹತ್ವ, ಜೀವನದ ನೆಮ್ಮದಿ ಮತ್ತು ಉನ್ನತಿಗೆ ಧರ್ಮದ ದಿಕ್ಸೂಚಿ ಮುಖ್ಯ. ಸಮಾಜಗಳ ನಡುವಿನ ಸಂಘರ್ಷ ಪ್ರಗತಿಗೆ ಅಡ್ಡಿಪಡಿಸುತ್ತದೆ. ಒಡೆದ ಮನಸ್ಸುಗಳನ್ನು ಬೆಸೆಯುವುದೆ ನಿಜಧರ್ಮ. ಭಾರತೀಯ ಸನಾತನ ಸಂಸ್ಕೃತಿಯನ್ನು ಉಳಿಸಿ, ದೇಶ-ಧರ್ಮದ ರಕ್ಷಣೆಗಾಗಿ ಪ್ರತಿಯೊಬ್ಬರೂ ಶ್ರಮಿಸಬೇಕು. ವಿಜ್ಞಾನವು ಸಾತ್ವಿಕ ಧರ್ಮದೊಂದಿಗೆ ಹೆಜ್ಜೆ ಹಾಕಿದಾಗ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯವಾಗುತ್ತದೆ ಎಂದರು.
ಶ್ರೀಮಠದ ಡಾ. ಮಳೆಯೋಗೀಶ್ವರ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಹರಪನಹಳ್ಳಿ ತೆಗ್ಗಿನಮಠದ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ, ಹಾಲಸ್ವಾಮಿ ಮಠದ ಶಿವಯೋಗಿ ಹಾಲಸ್ವಾಮೀಜಿ, ಅಳವಂಡಿಯ ಮರುಳಸಿದ್ದೇಶ್ವರ ಸ್ವಾಮೀಜಿ, ಅಂಗೂರಿನ ಅಂಗೂರೇಶ್ವರ ಸ್ವಾಮೀಜಿ, ವಿವಿಧ ಮಠಗಳ ಮಠಾಧೀಶರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net