ಕಾಲುವೆಗಳಿಗೆ ಪೂರ್ಣ ಪ್ರಮಾಣದ ನೀರು ಹರಿಸಿ

ಬಳ್ಳಾರಿಯ ಡಿಸಿ ಕಚೇರಿ ಆವರಣದಲ್ಲಿ ಬಿಜೆಪಿ ರೈತ ಮೋರ್ಚಾ ವತಿಯಿಂದ ತಹಸೀಲ್ದಾರ್ ಅಲಿಮಾ ಅವರಿಗೆ ಮನವಿ ಸಲ್ಲಿಸಲಾಯಿತು. ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಎಸ್.ಗುರುಲಿಂಗನಗೌಡ, ಪದಾಧಿಕಾರಿಗಳಾದ ಜಿ.ವಿರೂಪಾಕ್ಷಗೌಡ, ಗಣಪಾಲ್ ಐನಾಥರೆಡ್ಡಿ, ವೀರೇಶ್, ಮಹಾದೇವ, ಹನುಮಂತು ಇತರರಿದ್ದರು.
ಬಳ್ಳಾರಿಯ ಡಿಸಿ ಕಚೇರಿ ಆವರಣದಲ್ಲಿ ಬಿಜೆಪಿ ರೈತ ಮೋರ್ಚಾ ವತಿಯಿಂದ ತಹಸೀಲ್ದಾರ್ ಅಲಿಮಾ ಅವರಿಗೆ ಮನವಿ ಸಲ್ಲಿಸಲಾಯಿತು. ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಎಸ್.ಗುರುಲಿಂಗನಗೌಡ, ಪದಾಧಿಕಾರಿಗಳಾದ ಜಿ.ವಿರೂಪಾಕ್ಷಗೌಡ, ಗಣಪಾಲ್ ಐನಾಥರೆಡ್ಡಿ, ವೀರೇಶ್, ಮಹಾದೇವ, ಹನುಮಂತು ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿ ರೈತ ಮೋರ್ಚಾದಿಂದ ಆಗ್ರಹ

ಬಳ್ಳಾರಿ :

ತುಂಗಭದ್ರಾ ಜಲಾಶಯದಿಂದ ಎಚ್‌ಎಲ್‌ಸಿ ಹಾಗೂ ಎಲ್‌ಎಲ್ ಕಾಲುವೆಗಳಿಗೆ ಹರಿಸಲಾಗುತ್ತಿರುವ ನೀರಿನ ಮಟ್ಟ ಕಡಿಮೆಯಾಗಿದ್ದು, ಪೂರ್ಣ ಪ್ರಮಾಣದ ನೀರು ಬಿಡುಗಡೆಗೆ ಆಗ್ರಹಿಸಿ, ಇಲ್ಲಿನ ಡಿಸಿ ಕಚೇರಿ ಆವರಣದಲ್ಲಿ ಬಿಜೆಪಿ ರೈತ ಮೋರ್ಚಾ ವತಿಯಿಂದ ಪ್ರತಿಭಟಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎಸ್.ಗುರುಲಿಂಗನಗೌಡ ಮಾತನಾಡಿ, ತುಂಗಭದ್ರಾ ಜಲಾಶಯದಿಂದ ಆ.11ರಿಂದ ಕಾಲುವೆಗಳಿಗೆ ನೀರು ಹರಿಸಲಾಗುತ್ತಿದ್ದರೂ, ಪ್ರಸ್ತುತ ಕೇವಲ 3.5 ಅಡಿ ನೀರು ಮಾತ್ರ ಹರಿಯುತ್ತಿದೆ. ಹೊಲಗಳಿಗೆ ನೀರು ಹರಿಸುವ ಡಿಪಿಗಳು ನಾಲ್ಕರಿಂದ ಐದು ಅಡಿ ಮೇಲ್ಬಾಗದಲ್ಲಿರುವುದರಿಂದ ನೀರು ರೈತರ ಗದ್ದೆಗಳಿಗೆ ತಲುಪದೆ ವ್ಯರ್ಥವಾಗುತ್ತಿದೆ. ಜಿಲ್ಲೆಯಲ್ಲಿ ಮುಂಗಾರು ಶೇಕಡಾ 50 ರಷ್ಟು ಕೊರತೆಯಾಗಿದೆ. ಈ ಹಿಂದೆ ಹಿಂಗಾರಿನಲ್ಲಿ ಗೇಟ್ ನಿರ್ಮಾಣ ಕಾಮಗಾರಿಯಿಂದಾಗಿ ನೀರು ಸಿಗದೆ ರೈತರು ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿದ್ದಾರೆ.
ಕಾಲುವೆ ನೀರನ್ನು ನಂಬಿ ಸುಮಾರು 2.81 ಲಕ್ಷ ಎಕರೆ ಕೃಷಿ ಭೂಮಿ ಇದೆ. ಆದ್ದರಿಂದ, ಎಚ್‌ಎಲ್‌ಸಿ ಹಾಗೂ ಎಲ್‌ಎಲ್‌ಸಿಯ ಕಾಲುವೆಗಳಿಗೆ ತಕ್ಷಣವೇ ಪೂರ್ಣ ಪ್ರಮಾಣದ ನೀರು ಹರಿಸಿ, ಕೊನೆಯ ಭಾಗದ ಡಿಪಿಗಳಿಗೂ ನೀರು ತಲುಪಿಸಬೇಕು ಎಂದು ಒತ್ತಾಯಿಸಿದರು. ಎಚ್‌ಎಲ್‌ಸಿ ವಿತರಣಾ ಕಾಲುವೆ 14ರ ವ್ಯಾಪ್ತಿಯ ಉಪ-ಕಾಲುವೆಗಳಿಗೆ ಸಮಾನ ನೀರು ಹಂಚಿಕೆಗಾಗಿ ಯುದ್ಧೋಪಾದಿಯಲ್ಲಿ ತಾತ್ಕಾಲಿಕ ಗೇಟ್‌ಗಳನ್ನು ಅಳವಡಿಸಬೇಕು. ಕರ್ನಾಟಕ ಮತ್ತು ಆಂಧ್ರ ಪ್ರದೇಶದ ಪಾಲಿನ ನೀರನ್ನು ಏಕಕಾಲಕ್ಕೆ ಹರಿಸಲು ಕ್ರಮ ಕೈಗೊಳ್ಳದಿದ್ದಲ್ಲಿ, ರೈತರ ಪರವಾಗಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net