ವೃದ್ಧನನ್ನು ಹೆಗಲ ಮೇಲೆ ಹೊತ್ತು ತಂದ ಸಂಬಂಧಿಕರು

ಹೂವಿನಹಡಗಲಿ ತಹಸಿಲ್ ಕಚೇರಿಯಲ್ಲಿ ಅಳವಡಿಸಿರುವ ಲಿಫ್ಟ್ ಸಾರ್ವಜನಿಕ ಸೇವೆಗೆ ಲಭ್ಯವಿಲ್ಲದ ಕಾರಣ ವೃದ್ಧರೊಬ್ಬರನ್ನು ಸಂಬಂಧಿಕರು ಹೆಗಲಮೇಲೆ ಹೊತ್ತು ಉಪನೋಂದಣಿ ಕಚೇರಿಗೆ ತೆರಳಿದರು.
ಹೂವಿನಹಡಗಲಿ ತಹಸಿಲ್ ಕಚೇರಿಯಲ್ಲಿ ಅಳವಡಿಸಿರುವ ಲಿಫ್ಟ್ ಸಾರ್ವಜನಿಕ ಸೇವೆಗೆ ಲಭ್ಯವಿಲ್ಲದ ಕಾರಣ ವೃದ್ಧರೊಬ್ಬರನ್ನು ಸಂಬಂಧಿಕರು ಹೆಗಲಮೇಲೆ ಹೊತ್ತು ಉಪನೋಂದಣಿ ಕಚೇರಿಗೆ ತೆರಳಿದರು.
Published on

ಪ್ರಮುಖ ಮುಖ್ಯಾಂಶಗಳು

  • ಲಿಫ್ಟ್ ಕೀಲಿ ಕೊಡದ ಗುತ್ತಿಗೆದಾರ
  • ತಹಸಿಲ್ ಕಚೇರಿಯಲ್ಲಿ ಸಾರ್ವಜನಿಕರಿಗೆ ಸಮಸ್ಯೆ
ಹೂವಿನಹಡಗಲಿ: ಪಟ್ಟಣದ ತಹಸಿಲ್ ಕಚೇರಿಯ ಎರಡನೇ ಮಹಡಿಯಲ್ಲಿರುವ ಉಪನೋಂದಣಾಧಿಕಾರಿ ಕಚೇರಿಗೆ ತೆರಳಲು ಲಿಫ್ಟ್ ಇದ್ದೂ ಇಲ್ಲದಂತಾಗಿದೆ.
ವೃದ್ಧರು ಹಾಗೂ ಅಂಗವಿಕಲರು ಎರಡನೇ ಮಹಡಿಯಲ್ಲಿರುವ ಕಚೇರಿಗೆ ತೆರಳಲು ಸಮಸ್ಯೆಯಾಗುತ್ತಿರುವುದರ ಕುರಿತು ‘ವಿಜಯವಾಣಿ’ ವರದಿ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಶಾಸಕ ಕೃಷ್ಣನಾಯ್ಕ 21 ಲಕ್ಷ ರೂ. ವೆಚ್ಚದಲ್ಲಿ ಲಿಫ್ಟ್ ಅಳವಡಿಸಲು ಸೂಚಿಸಿದ್ದರು. ಕೆಲ ದಿನಗಳ ಹಿಂದೆ ಲಿಫ್ಟ್ ಬಳಕೆಗೆ ಚಾಲನೆ ನೀಡಿದ್ದರು.
ಚಾಲನೆ ನೀಡಿದ ಮರುದಿನದಿಂದಲೇ ಲಿಫ್ಟ್ ಬಳಕೆಗಿಲ್ಲದಂತಾಗಿದೆ. ಈ ಕುರಿತು ಸಾರ್ವಜನಿಕರು ಅಧಿಕಾರಿಗಳನ್ನು ಕೇಳಿದರೆ ಗುತ್ತಿಗೆದಾರ ಕೀಲಿ ನೀಡಿಲ್ಲ ಎಂದು ಉತ್ತರಿಸುತ್ತಿದ್ದಾರೆ. ಇದರಿಂದಾಗಿ ಕಚೇರಿಗೆ ಬಂದಿದ್ದ ವೃದ್ಧರೊಬ್ಬರನ್ನು ಅವರ ಮನೆಯವರು ಶುಕ್ರವಾರ ಹೊತ್ತೊಯ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net