ಅರಣ್ಯ ಬ್ಲಾಕ್ ಅನ್ನು ಪರಿಸರ ಮರುಸ್ಥಾಪನೆ (ಅರಣ್ಯೀಕರಣ) ವಲಯದಡಿ ಪುನರುಜ್ಜೀವನಗೊಳಿಸಲು 20.06 ಕೋಟಿ ರೂ. ವೆಚ್ಚದ ಯೋಜನೆಗೆ ಕರ್ನಾಟಕ ಗಣಿ ಪರಿಸರ ಪುನಃಸ್ಥಾಪನೆ ನಿಗಮ (ಕೆಎಂಆರ್‌ಸಿ)ಯೂ ಅನುಮೋದನೆ ನೀಡಿದ್ದು, ಸದ್ಯ ಹಂತ ಹಂತವಾಗಿ ಕಾರ್ಯ ನಿರ್ವಹಿಸಲಾಗುತ್ತಿದೆ. ಬಳ್ಳಾರಿ ವಲಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ನೇತೃತ್ವದಲ್ಲಿ ಈ ಮಹತ್ವಾಕಾಂಕ್ಷಿ ಯೋಜನೆ ಜಾರಿಗೆ ಬರಲಿದ್ದು, 2030ರ ವೇಳೆಗೆ ಕಾಡಿನ ಚಿತ್ರಣವೇ ಬದಲಾಗುವ ಸಾಧ್ಯತೆಯಿದೆ.