ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಒಂಟಿ ಮಹಿಳೆಯರ ಸಂರಕ್ಷಣಾ ಸಂಘದ ತಾಲೂಕು ಘಟಕದಿಂದ ಸಂಡೂರಿನ ಸಿಡಿಪಿಒ ಕಚೇರಿ ಎಫ್‌ಡಿಎಗೆ ಮನವಿ ಸಲ್ಲಿಸಲಾಯಿತು. ತಾಲೂಕು ಅಧ್ಯಕ್ಷೆ ಸುನೀತಾ, ಕಾರ್ಯದರ್ಶಿ ತ್ರಿವೇಣಿ, ಸಂಚಾಲಕರಾದ ಬಿ.ಮಾಳಮ್ಮ, ಎಚ್.ದುರುಗಮ್ಮ, ಶಾರದಮ್ಮ, ಮಾರಮ್ಮ, ಹುಲಿಗೆಮ್ಮ, ಭಾರತಿ, ಏರಿಯಮ್ಮ, ಸರಸ್ವತಿ, ಪದ್ಮ, ದುರ್ಗಮ್ಮ, ಸುಮಾ, ಲಕ್ಷ್ಮೀ ಎ.ಸ್ವಾಮಿ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಸಂರಕ್ಷಣಾ ಸಂಘದ ತಾಲೂಕು ಅಧ್ಯಕ್ಷೆ ಸುನೀತಾ ಆಗ್ರಹ
ಸಂಡೂರು ಒಂಟಿ ಮಹಿಳೆಯರ ಸಂರಕ್ಷಣಾ ಸಂಘ ಪ್ರತಿಭಟನೆ
ಸಂಡೂರು: ರಾಜ್ಯದಲ್ಲಿನ ಒಂಟಿ ಮಹಿಳೆಯರ ಸಂರಕ್ಷಣೆ ಹಾಗೂ ಪುನರ್ವಸತಿ ಕಾರ್ಯ ಚುರುಕಾಗಿ ಕೈಗೊಳ್ಳಬೇಕು ಎಂದು ರಾಜ್ಯ ಒಂಟಿ ಮಹಿಳೆಯರ ಸಂರಕ್ಷಣಾ ಸಂಘದ ತಾಲೂಕು ಅಧ್ಯಕ್ಷೆ ಸುನೀತಾ ಆಗ್ರಹಿಸಿದರು.
ಪಟ್ಟಣದ ಸಿಡಿಪಿಒ ಕಚೇರಿ ಮುಂದೆ ಒಂಟಿ ಮಹಿಳೆಯರ ಸಂರಕ್ಷಣಾ ಸಂಘದ ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ದೇವದಾಸಿಯೇತರ ಒಂಟಿ ಮಹಿಳೆಯರ ಗಣತಿ ಮಾಡಿ ದೇವದಾಸಿ ಪುನರ್ವಸತಿ ಮಾದರಿಯಲ್ಲಿ ಕ್ರಮವಹಿಸಬೇಕು. ಮಾಸಿಕ ಪಿಂಚಣಿ ಆರು ಸಾವಿರ ರೂ.ನೀಡಬೇಕು. ತಲಾ 10 ಲಕ್ಷ ರೂ. ಇಡುಗಂಟು ನೀಡಬೇಕು. ಮಾಸಿಕ 10 ಸಾವಿರ ರೂ. ನಿರುದ್ಯೋಗ ಭತ್ಯೆ ನೀಡಬೇಕು. ಒಂಟಿ ಮಹಿಳೆಯನ್ನು ವಿವಾಹವಾಗುವ ಪುರುಷರಿಗೆ ಪ್ರೋತ್ಸಾಹಧನ ಕೊಡಬೇಕೆಂದು ಒತ್ತಾಯಿಸಿದರು.
ಒಂಟಿ ಮಹಿಳೆ ಗರ್ಭಿಣಿ ಅಥವಾ ಬಾಣಂತಿಯರಾಗಿದ್ದಲ್ಲಿ 18 ತಿಂಗಳು ಮಾಸಿಕ 10 ಸಾವಿರ ರೂ. ವಿಶೇಷ ನೆರವು ಮತ್ತು ವೈದ್ಯಕೀಯ ರಕ್ಷಣೆ ನೀಡಬೇಕು. ಒಂಟಿ ಮಹಿಳೆಯರ ವಿರುದ್ಧದ ಸಾಮಾಜಿಕ ಬಹಿಷ್ಕಾರ ನಿವಾರಣೆಗಾಗಿ ಅವರ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಬಿಪಿಎಲ್ ಕಾರ್ಡ್ ಹಾಗೂ 14 ದಿನಬಳಕೆಯ ವಸ್ತುಗಳನ್ನು ನೀಡಬೇಕು. ಸ್ವ ಉದ್ಯೋಗ ತರಬೇತಿ ನೀಡಿ ಶೇ.75 ಸಹಾಯಧನ ಆಧಾರಿತ ಸಾಲ ಕೊಡಬೇಕು. ಶಿಕ್ಷಣ, ಉದ್ಯೋಗ, ರಾಜಕಾರಣದಲ್ಲಿ ಮೀಸಲಾತಿ, ವೃದ್ಧ ಒಂಟಿ ಮಹಿಳೆಯರಿಗಾಗಿ ಗ್ರಾಪಂಗೆ ಒದರಂತೆ ವೃದ್ಧಾಶ್ರಮ ಸ್ಥಾಪನೆ ಸೇರಿದಂತೆ ವಿವಿಧ ಕೆಲಸಗಳಿಗಾಗಿ ಬಜೆಟ್‌ನಲ್ಲಿ ಅನುದಾನ ಕಾಯ್ದಿರಿಸಬೇಕು. ಕೃಷಿಯಲ್ಲಿ ತೊಡಗುವವರಿಗೆ ಕನಿಷ್ಠ 5 ಎಕರೆ ನೀರಾವರಿ ಜಮೀನು ಒದಗಿಸಬೇಕೆಂದು ಒತ್ತಾಯಿಸಿದರು. ಸಿಡಿಪಿಒ ಕಚೇರಿ ಎಫ್‌ಡಿಎಗೆ ಮನವಿ ಸಲ್ಲಿಸಲಾಯಿತು.