ನಗರದಲ್ಲಿ ಬೆಂಕಿಗೆ ಆಹುತಿಯಾದ ಮನೆಗೆ ಶನಿವಾರ ಭೇಟಿ ನೀಡಿ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕೌಲಬಜಾರ್ ನಿವಾಸಿಗಳಾದ ಸೋಹಿಲ್ (18), ಸುರೇಶ್ (32) ಹಾಗೂ ಆರು ಬಾಲಕರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಇದರಲ್ಲಿ ಹಲವರು ಶಾಲಾ, ಕಾಲೇಜು ವಿದ್ಯಾರ್ಥಿಗಳಾಗಿದ್ದು, ಕೆಲವರು ಶಾಲೆ ಬಿಟ್ಟಿದ್ದಾರೆ. ಫ್ಯಾನ್ಸಿ ಸ್ಟೋರ್‌ಗಳಲ್ಲಿ ಕೆಲಸ ಮಾಡುವವರಾಗಿದ್ದಾರೆ. ಇಬ್ಬರು ಮುಂಬೈನಿಂದ ಬಂದವರಿದ್ದಾರೆ. ಇವೆಲ್ಲರೂ ಕೂಲಿ ಕಾರ್ಮಿಕರು, ಚಾಲಕರು ಮಕ್ಕಳು. ಯಾವ ಉದ್ದೇಶ ಇಟ್ಟುಕೊಂಡು ಕೃತ್ಯ ಎಸಗಿದ್ದರೆ ಎಂಬುದು ಖಚಿತ ಮಾಹಿತಿಲ್ಲ. ಸಮಗ್ರ ತನಿಖೆ ನಡೆಸಲಾಗುವುದು ಎಂದರು.