ರತ್ನಮ್ಮವ್ವ ಅಂತ್ಯಕ್ರಿಯೆ ಗೊಂದಲಕ್ಕೆ ತೆರೆ

 ರತ್ನಮ್ಮವ್ವ
ರತ್ನಮ್ಮವ್ವ
Published on

ಪ್ರಮುಖ ಮುಖ್ಯಾಂಶಗಳು

  • ಅನಾರೋಗ್ಯ
  • ಪೀಠಾಧಿಪತಿ
  • ಮೆರವಣಿಗೆ
ಬಳ್ಳಾರಿ : ತಾಲೂಕಿನ ಕೊಳಗಲ್ ಗ್ರಾಮದಲ್ಲಿನ ಎರ‌್ರಿತಾತ ಮಠದ ಎರಡನೇ ಪೀಠಾಧಿಪತಿ ರತ್ನಮ್ಮವ್ವ ಅವರ ಅಂತ್ಯಕ್ರಿಯೆ ಸಾವಿರಾರು ಭಕ್ತರು ಸಮ್ಮುಖದಲ್ಲಿ ನಡೆಯಿತು.
ಇದಕ್ಕೂ ಮುನ್ನ ಗ್ರಾಮದಲ್ಲಿ ರತ್ನಮ್ಮವ್ವ ಅವರ ಪಾರ್ಥಿವ ಶರೀರವನ್ನು ಮೆರವಣಿಗೆ ನಡೆಸಲಾಯಿತು. ಈ ವೇಳೆ ಗ್ರಾಮ ಸೇರಿದಂತೆ ನಾನಾ ಭಾಗಗಳಿಂದ ಸಾವಿರಾರು ಭಕ್ತ ಸಮೂಹ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಅಂತಿಮ ದರ್ಶನ ಪಡೆದರು. ಮಾಜಿ ಸಚಿವ ಬಿ.ಶ್ರೀರಾಮುಲು ಸೇರಿದಂತೆ ಅನೇಕ ಗಣ್ಯರು ಭೇಟಿ ನೀಡಿ ರತ್ನಮ್ಮವ್ವ ಅವರ ದರ್ಶನ ಪಡೆದು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು.
ಕೊಳಗಲ್ ಗ್ರಾಮದ ಎರ‌್ರಿತಾತ ಮಠದ ಎರಡನೇ ಪೀಠಾಧಿಪತಿಯಾಗಿದ್ದ ಎರ‌್ರೆಪ್ಪ ತಾತನವರ ಪತ್ನಿಯಾಗಿದ್ದ ರತ್ನಮ್ಮವ್ವ ಅವರು ಅನಾರೋಗ್ಯದಿಂದ ಬಳಲಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಗುರುವಾರ ನಿಧನರಾಗಿದ್ದರು. ಅವರ ಪಾರ್ಥೀವ ಶರೀರವನ್ನು ಮಠದ ಎರಡನೇ ಪೀಠಾಧಿಪತಿ ಎರೆಪ್ಪ ತಾತ ಅವರ ಸಮಾದಿ ಪಕ್ಕದಲ್ಲಿಯೇ ಪತ್ನಿ ರತ್ನಮ್ಮವ್ವ ಅವರ ಅಂತ್ಯಕ್ರಿಯೆಯನ್ನು ನಡೆಸುವ ವಿಚಾರಕ್ಕೆ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಭಿನ್ನಾಭಿಪ್ರಾಯ ಭುಗಿಲೆದ್ದಿತ್ತು. ಅಂತ್ಯಕ್ರಿಯೆ ವಿಚಾರದ ಹಿನ್ನೆಲೆ ಗ್ರಾಮದಲ್ಲಿ ಬಿಗುವಿನ ವಾತವರಣ ನಿರ್ಮಾಣವಾಗಿ ಗೊಂದಲಕ್ಕೆ ಎಡೆಮಾಡಿಕೊಟ್ಟಿತ್ತು. ಶುಕ್ರವಾರ ಗ್ರಾಮಕ್ಕೆ ಭೇಟಿ ನೀಡಿದ ಎಸ್ಪಿ ಅವರು ಅಲ್ಲಿನ ಮುಖಂಡರೊಂದಿಗೆ ಚರ್ಚಿಸಿ ಒಮ್ಮತದ ನಿರ್ಧಾರ ಕೈಗೊಳ್ಳುವಂತೆ ಸೂಚಿಸಿದ್ದರು. ಈ ಹಿನ್ನೆಲೆ ಗ್ರಾಮಸ್ಥರು ಒಗ್ಗೂಡಿ ಅಂತಿಮವಾಗಿ ರತ್ನಮ್ಮವ್ವ ಅವರನ್ನು ಮಠದ ಮುಂಭಾಗದಲ್ಲಿನ ಮಠಕ್ಕೆ ಸೇರಿದ ಸ್ಥಳದಲ್ಲಿ ಅಂತ್ಯಕ್ರಿಯೆ ನಡೆಸಿದರು. ಈ ಸಂದರ್ಭದಲಿ ್ಲಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಯಿತು.
===
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net