ದಾನ-ಧರ್ಮಗಳ ಪ್ರತಿರೂಪ ರಂಜಾನ್

ಹರಪನಹಳ್ಳಿ ಸರ್ಕಾರಿ ನೌಕರರ ಭವನದಲ್ಲಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಆಯೋಜಿಸಿದ್ದ ಆಹಾರ ಕಿಟ್ ವಿತರಣೆ  ಕಾರ್ಯಕ್ರಮವನ್ನು ಶಾಸಕಿ ಎಂ.ಪಿ ಲತಾ ಮಲ್ಲಿಕಾರ್ಜುನ ಉದ್ಘಾಟಿಸಿದರು. ಸಂಘದ ತಾಲೂಕು ಅಧ್ಯಕ್ಷ ಇಸ್ಮಾಯಿಲ್, ಪದಾಧಿಕಾರಿಗಳಾದ ಹುಸೇನ್ ಪೀರ್, ಉಸ್ಮಾನ್ ಸಾಹೇಬ್, ಸಲಿಂ, ಮುಸ್ತಫಾ, ಸವಣೂರು ಶರೀಫ, ಮಕ್ಬುಲ್ ಬಾಷಾ, ರಿಜ್ವಾನ್ ಸಾಹೇಬ್, ಹಡಗಲಿಯ ಶೇಖ್ ಆಹ್ಮದ್, ನಗೀನ ಬಾನು ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಅನಿಸಿಕೆ
  • ಆಹಾರ ಕಿಟ್ ವಿತರಣೆ ಕಾರ್ಯಕ್ರಮ
ಹರಪನಹಳ್ಳಿ: ಬುದ್ಧ, ಬಸವ, ಅಂಬೇಡ್ಕರ್, ಮೊಹಮ್ಮದ್ ಪೈಗಂಬರ್ ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ತಿಳಿಸಿದರು.
ನಗರದ ಸರ್ಕಾರಿ ನೌಕರರ ಭವನದಲ್ಲಿ ರಂಜಾನ್ ನಿಮಿತ್ತ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಆಯೋಜಿಸಿದ್ದ ಆಹಾರ ಕಿಟ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಭಾನುವಾರ ಮಾತನಾಡಿದರು. ಎಲ್ಲ ಧರ್ಮಗಳು ಶಾಂತಿ- ಸಹಬಾಳ್ವೆಯನ್ನು ಸಾರುತ್ತವೆಯೇ ಹೊರತು ಕದನ ಬಲಿದಾನಗಳನ್ನಲ್ಲ. ನಾವೆಲ್ಲರೂ ಭಾರತೀಯರು ಎನ್ನುವುದನ್ನು ಅರಿಯ ಬೇಕು. ರಂಜಾನ್ ಸಹನೆ, ತಾಳ್ಮೆ ಹಾಗೂ ದಾನ-ಧರ್ಮಗಳ ಪ್ರತಿರೂಪವಾಗಿದೆ ಎಂದರು.
ಪುರಸಭೆ ಮಾಜಿ ಸದಸ್ಯ ಅಬ್ದುಲ್ ರೆಹಮಾನ್ ಸಾಬ್ ಮಾತನಾಡಿ, ಸರ್ವಧರ್ಮೀಯರನ್ನು ಪ್ರೀತಿಯಿಂದ ಕಾಣಲು ಮೊಹಮ್ಮದ್ ಪೈಗಂಬರ್ ಅವರು ತಿಳಿಸಿದ್ದಾರೆ. ಅದರಂತೆ ನಾವೆಲ್ಲರೂ ಅನ್ಯ ಸಮುದಾಯಗಳ ಜತೆಗೆ ಸಹೋದರತ್ವ ಭಾವನೆಯಿಂದ ಇರಬೇಕು ಎಂದರು.
ಪ್ರಗತಿಪರ ಚಿಂತಕ ಕೋಡಿಹಳ್ಳಿ ಭೀಮಪ್ಪ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎನ್.ಜಿ.ಮನೋಹರ್ ಮಾತನಾಡಿದರು. ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಮ್ ಸಮುದಾಯದ 150 ಬಡ ಕುಟುಂಬಗಳಿಗೆ ಪಡಿತರ ಕಿಟ್ ವಿತರಿಸಲಾಯಿತು. ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಾದ ಷರೀಫ್ ಮಕರಬ್ಬಿ, ಮಂಜುನಾಥ ಪೂಜಾರ್, ಸೂರ್ಯನಾಯ್ಕ, ನಾಗಪ್ಪ ಸಿ, ಪಿ.ಸುಬ್ಬಣ್ಣ, ಗುರುಮೂರ್ತಿ, ಗಿರಿರಾಜ್ ಎಲ್ ಎಚ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net