ನದಿ ಸಂರಕ್ಷಣೆ ಕುರಿತು ತಿಳಿವಳಿಕೆ ಮೂಡಿಸಿ

ಕಂಪ್ಲಿಯಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನ 3ನೇ ಹಂತದ ಜಲ ಜಾಗೃತಿ-ಜನ ಜಾಗೃತಿ ಪಾದಯಾತ್ರೆ ನಡೆಯಿತು. ಜಲತಜ್ಞ ರಾಜೇಂದ್ರಸಿಂಗ್, ಶಾಸಕ ಜೆ.ಎನ್.ಗಣೇಶ್, ವಿಧಾನಪರಿಷತ್ ಸದಸ್ಯ ವೈ.ಎಂ.ಸತೀಶ್, ಸಂಚಾಲಕರಾದ ಡಿ.ಆರ್.ಪಾಟೀಲ್, ಮಹಿಮಾ ಪಾಟೀಲ್ ಇತರರಿದ್ದರು.
ಕಂಪ್ಲಿಯಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನ 3ನೇ ಹಂತದ ಜಲ ಜಾಗೃತಿ-ಜನ ಜಾಗೃತಿ ಪಾದಯಾತ್ರೆ ನಡೆಯಿತು. ಜಲತಜ್ಞ ರಾಜೇಂದ್ರಸಿಂಗ್, ಶಾಸಕ ಜೆ.ಎನ್.ಗಣೇಶ್, ವಿಧಾನಪರಿಷತ್ ಸದಸ್ಯ ವೈ.ಎಂ.ಸತೀಶ್, ಸಂಚಾಲಕರಾದ ಡಿ.ಆರ್.ಪಾಟೀಲ್, ಮಹಿಮಾ ಪಾಟೀಲ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತುಂಗಭದ್ರಾ ನದಿ
  • ನಿರ್ಮಲ ತುಂಗಭದ್ರಾ
  • ಜನ ಜಾಗೃತಿ

ನದಿ ಸಂರಕ್ಷಣೆ ಕುರಿತು ತಿಳಿವಳಿಕೆ ಮೂಡಿಸಿ

ಕಂಪ್ಲಿ: ನಗರಕ್ಕೆ ಆಗಮಿಸಿದ ನಿರ್ಮಲ ತುಂಗಭದ್ರಾ ಅಭಿಯಾನ 3ನೇ ಹಂತದ ಜಲ ಜಾಗೃತಿ-ಜನ ಜಾಗೃತಿ ಪಾದಯಾತ್ರೆಯನ್ನು ಶನಿವಾರ ತುಂಗಭದ್ರಾ ನದಿ ತಟದಲ್ಲಿ ಪ್ರಧಾನ ಸಂಚಾಲಕ ಡಾ.ಭಟ್ಟ ರಾಮು ಬರಮಾಡಿಕೊಂಡರು.
ಪ್ರಮುಖ ಬೀದಿಗಳಲ್ಲಿ ಸಂಚರಿಸಿ ವೀರಶೈವ ಭವನದಲ್ಲಿ ಸಮಾವೇಶಗೊಂಡಿತು.
ಜಲತಜ್ಞ ರಾಜೇಂದ್ರಸಿಂಗ್ ಮಾತನಾಡಿ, ದೇಶದ 15,800 ನದಿಗಳು ಕಲುಷಿತಗೊಂಡಿದ್ದು, ರಾಜಕೀಯ ಹಾಗೂ ಪಕ್ಷದ ಭಾವನೆ ತೊರೆದು ಒಟ್ಟಾಗಿ ನೈರ್ಮಲ್ಯಗೊಳಿಸಬೇಕು.
ನದಿಗಳು ಆಧ್ಯಾತ್ಮಿಕ, ಧಾರ್ಮಿಕ ಮತ್ತು ಭಾವನಾತ್ಮಕ ನೆಲೆಗಳ ಸಂಬಂಧ ಹೊಂದಿದ್ದು, ಮಕ್ಕಳಲ್ಲಿ ನದಿ ಸಂರಕ್ಷಣೆ ಕುರಿತು ತಿಳಿವಳಿಕೆ ಮೂಡಿಸಬೇಕು ಎಂದರು.
ಸಂಚಾಲಕಿ ರಾಜಶ್ರೀ ಚೌದರಿ ಮಾತನಾಡಿ, ಅಭಿವೃದ್ಧಿ ನೆಪದಲ್ಲಿ ನೀರು, ಮಣ್ಣು, ಗಾಳಿಯನ್ನು ಕಲುಷಿತಗೊಳಿಸಿದ್ದು, ಭವಿಷ್ಯದ ಜೀವನಕ್ಕೆ ಅಪಾಯಕಾರಿಯಾಗಿದೆ. ಕೈಗಾರಿಕೆ, ಚರಂಡಿ ತ್ಯಾಜ್ಯ ನೀರನ್ನು ನದಿಗೆ ಬಿಡುವ ಮುನ್ನ ಕಡ್ಡಾಯವಾಗಿ ಸಂಸ್ಕರಿಸುವ ಯೋಜನೆ ರೂಪಿಸಬೇಕು.
ನದಿ ನೈರ್ಮಲ್ಯ ಕಾಪಾಡುವುದು ಸಾರ್ವಜನಿಕರ ಕರ್ತವ್ಯ. ಕಲುಷಿತ ನೀರಿನಿಂದ ಉಂಟಾಗುವ ರೋಗಗಳಿಂದ ವಿಮುಖರಾಗಲು ನದಿಪಾತ್ರದ ಜನತೆ ನೈರ್ಮಲ್ಯ ಕಾಪಾಡಬೇಕು ಎಂದು ತಿಳಿಸಿದರು.
ಪ್ರದಾನ ಸಂಚಾಲಕ ಬಸವರಾಜ ಪಾಟೀಲ್ ವೀರಾಪುರ, ಶಾಸಕ ಜೆ.ಎನ್.ಗಣೇಶ್, ವಿಧಾನಪರಿಷತ್ ಸದಸ್ಯ ವೈ.ಎಂ.ಸತೀಶ್, ಸಂಚಾಲಕರಾದ ಡಾ.ಶಿವಕುಮಾರ ಮಾಲಿಪಾಟೀಲ್, ಎಸ್.ಎಸ್.ಎಂ.ಚನ್ನಯ್ಯಸ್ವಾಮಿ, ಇಟಗಿ ವಿರೂಪಾಕ್ಷಿ, ಉಗಾದಿ ಬಸವರಾಜ, ಟಿ.ಕೃಷ್ಣ, ರಾಜರಾಮ್ ಚಿತ್ರಗಾರ್, ಸೋಗಿ ಸಂತೋಷ್, ಇಂದ್ರಜಿತ್‌ಸಿಂಗ್, ಮಾಧವನ್, ಪವನ್‌ಕುಮಾರ್ ಗುಂಡೂರು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net