ದಾಸ್ತಾನು ಲಭ್ಯ : ಪ್ರಮುಖವಾಗಿ ಜಿಲ್ಲೆಯಲ್ಲಿ ಭತ್ತ, ಜೋಳ, ನೆಲಗಡಲೆ, ತೊಗರಿ, ರಾಗಿ, ಸಜ್ಜೆ, ಜೋಳ, ಸೂರ್ಯಕಾಂತಿ, ನವಣೆ ಹೆಸರು ಬಿತ್ತನೆ ಮಾಡಲಿದ್ದಾರೆ. ನಗರ ಹಾಗೂ ತಾಲೂಕು ಕೇಂದ್ರ ಸೇರಿ ಒಟ್ಟು 13 ರೈತ ಸಂಪರ್ಕ ಕೇಂದ್ರಗಳ ಮೂಲಕ ಬೀಜಗಳು ವಿತರಿಸಲಾಗುತ್ತಿದೆ. 3000 ಕ್ವಿಂಟಾಲ್ ಭತ್ತ, 3000 ಕ್ವಿಂಟಾಲ್ ಮೆಕ್ಕೆಜೋಳ, 2900 ಕ್ವಿಂಟಾಲ್ ನೆಲಗಡಲೆ, 1000 ಕ್ವಿಂಟಾಲ್ ತೊಗರಿ, 110 ಕ್ವಿಂಟಾಲ್ ರಾಗಿ, 100 ಕ್ವಿಂಟಾಲ್ ಸಜ್ಜೆ, 150 ಕ್ವಿಂಟಾಲ್ ಜೋಳ, 100 ಕ್ವಿಂಟಾಲ್ ಸೂರ್ಯಕಾಂತಿ, 50 ಕ್ವಿಂಟಾಲ್ ನವಣೆ ಹಾಗೂ ಐದು ಕ್ವಿಂಟಾಲ್ ಹೆಸರು ಸೇರಿ ಒಟ್ಟು 10,415 ದಾಸ್ತಾನು ಲಭ್ಯವಿದ್ದು, ಈ ಪೈಕಿ 1,033 ಕ್ವಿಂಟಾಲ್ ಬೀಜ ರೈತರಿಗೆ ವಿತರಿಸಲಾಗಿದೆ.