ಕಂಪ್ಲಿ: ಪಟ್ಟಣದ ಎಪಿಎಂಸಿಯಲ್ಲಿ ರಾಶಿ ಹಾಕಿದ್ದ ಭತ್ತ, ಮೆಕ್ಕೆಜೋಳ ಮಂಗಳವಾರ ಮಳೆಗೆ ತೊಯ್ದಿದೆ. ಕೆಲ ರೈತರು ಭತ್ತವನ್ನು ತೂಕ ಮಾಡಿಸುತ್ತಿದ್ದರೆ ಮತ್ತೆ ಕೆಲವರು ಒಣಗಲು ಹಾಕಿದ್ದರು. ಆಗ ಮಳೆ ಸುರಿದಿದ್ದರಿಂದ ತೊಯ್ದಿದೆ. ಭತ್ತ, ಮೆಕ್ಕೆಜೋಳ ರಾಶಿಯನ್ನು ತಾಡಪಾಲಿನಿಂದ ಮುಚ್ಚಿದರೂ ಮಳೆ ನೀರು ಹೋಗಿ ಧಾನ್ಯ ತೊಯ್ದಿವೆ.