ಬಳ್ಳಾರಿ : ನಗರದ ಕಂಬಳಿ ಬಜಾರ್‌ನ ಮನೆಯೊಂದರ ಮೇಲೆ ದಾಳಿ ನಡೆಸಿರುವ ಪೊಲೀಸರು, ಅಕ್ರಮವಾಗಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಜಾಲ ಭೇದಿಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಇಲ್ಲಿನ ಕಂಬಳಿ ಬಜಾರ್‌ನ ಅಭರಣ ಅಂಗಡಿ ಕಾವಲುಗಾರ ಕೆ. ಬ್ರಹ್ಮಯ್ಯಚಾರಿ, ಆತನ ಪತ್ನಿ ವಿಶಾಲಾಕ್ಷಿ , ಬಿಸಿಲಹಳ್ಳಿ ಗ್ರಾಮದ ವೆಂಕಟೇಶ್ ಹಾಗೂ ಆಂಧ್ರದ ಅನಂತಪುರ ಜಿಲ್ಲೆಯ ಪೆಟ್ಟೂರು ಗ್ರಾಮದ ಪಿ. ನಾಗರಾಜ ಬಂಧಿತರು.