ಗಾಂಜಾ, ಸಿಗರೇಟ್, ಮದ್ಯ ವ್ಯಸನದಿಂದ ಆರೋಗ್ಯ ಹದಗೆಡುತ್ತದೆ. ಆದ್ದರಿಂದ ಮಾದಕ ವಸ್ತುಗಳಿಗೆ ದಾಸರಾಗದೆ, ಆರೋಗ್ಯವಂತರಾಗಿ, ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬಾಳಬೇಕು ಎಂದರು. ತಾಲೂಕು ಆರೋಗ್ಯಾಧಿಕಾರಿ ಎಸ್.ಪಿ.ಪ್ರದೀಪ್ ಮಾತನಾಡಿ, ಸಿಗರೇಟ್, ಡ್ರಗ್ಸ್, ಕೊಕೆನ್ ವ್ಯಸನಿಗಳ ಹತ್ತಿರ ಇದ್ದಾಗ ಉಸಿರಿನ ಮೂಲಕ ದೇಹ ಸೇರುತ್ತದೆ. ಇದರಿಂದ ಲಿವರ್, ಕಿಡ್ನಿ ಹಾಳಾಗುವುದಲ್ಲದೆ ಪ್ರಾಣಕ್ಕೂ ಕುತ್ತು ತರುತ್ತದೆ ಎಂದರು.