ವದ್ದಟ್ಟಿ ಗ್ರಾಮದಲ್ಲಿ ಕಂದಾಯ ಇಲಾಖೆಯಿಂದ ಆಯೋಜಿಸಿದ್ದ ಇ ಪೌತಿ ಖಾತೆ ಆಂದೋಲನ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು. ಕಂದಾಯ ಇಲಾಖೆಗೆ ಒಳಪಟ್ಟಿರುವ ಜಮೀನು ಪಹಣಿಗೆ ಮಾಲೀಕರ ಆಧಾರ್ ಸಂಖ್ಯೆ ಜೋಡಿಸಲಾಗಿದೆ. ಇದರಿಂದ ಜಮೀನಿನ ದಾಖಲೆ ನಕಲಿ ಆಗುವುದು ತಪ್ಪಿದೆ. ಆಧಾರ್ ಜೋಡಣೆ ಸಂದರ್ಭದಲ್ಲಿ ಮರಣ ಹೊಂದಿದ, ಈಗ ರೈತರ ಹೆಸರಲ್ಲಿರುವ ಪಹಣಿ ಗುರುತಿಸುವ ಕೆಲಸ ಮಾಡಲಾಗಿದೆ. ಅರ್ಜಿದಾರರು ಆಧಾರ್ ಕಾರ್ಡ್, ವಂಶವೃಕ್ಷ, ಮೃತರ ಮರಣ ಪ್ರಮಾಣಪತ್ರ, ಅಫಿಡವಿಟ್ ಸೇರಿದಂತೆ ಇತರ ದಾಖಲೆ ನೀಡಿದರೆ ಶೀಘ್ರ ವಾರಸುದಾರರಿಗೆ ಖಾತೆ ವರ್ಗಾವಣೆ ಆಗಲಿದೆ ಎಂದು ತಿಳಿಸಿದರು.