ಗ್ರಾಮೀಣ ಜನರಿಗೆ ಉತ್ತಮ ಸೇವೆ

ಸಂಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಂದಾಲ್ ಒದಗಿಸಿದ ಮೊಬೈಲ್ ಆರೋಗ್ಯ ಘಟಕಗಳನ್ನು ಶಾಸಕಿ ಅನ್ನಪೂರ್ಣ ತುಕಾರಾಮ್ ಉದ್ಘಾಟಿಸಿದರು. ಜೆಎಸ್‌ಡಬ್ಲ್ಯು ಫೌಂಡೇಷನ್ ದಕ್ಷಿಣ ಭಾರತ ವಲಯ ಮುಖ್ಯಸ್ಥ ಪೆದ್ದಣ್ಣ ಬಿಡಲಾ, ಮಾನವ ಸಂಪನ್ಮೂಲ ವ್ಯವಹಾರ ಸಹಭಾಗಿತ್ವದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮಯೂರೇಶ್ ಬಾಪಟ್ ಮತ್ತಿತರರಿದ್ದರು.
ಸಂಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಂದಾಲ್ ಒದಗಿಸಿದ ಮೊಬೈಲ್ ಆರೋಗ್ಯ ಘಟಕಗಳನ್ನು ಶಾಸಕಿ ಅನ್ನಪೂರ್ಣ ತುಕಾರಾಮ್ ಉದ್ಘಾಟಿಸಿದರು. ಜೆಎಸ್‌ಡಬ್ಲ್ಯು ಫೌಂಡೇಷನ್ ದಕ್ಷಿಣ ಭಾರತ ವಲಯ ಮುಖ್ಯಸ್ಥ ಪೆದ್ದಣ್ಣ ಬಿಡಲಾ, ಮಾನವ ಸಂಪನ್ಮೂಲ ವ್ಯವಹಾರ ಸಹಭಾಗಿತ್ವದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮಯೂರೇಶ್ ಬಾಪಟ್ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕಿ ಅನ್ನಪೂರ್ಣ ತುಕಾರಾಮ್ ಹೇಳಿಕೆ
  • ಸಂಡೂರು ಸಂಚಾರಿ ಆರೋಗ್ಯ ಘಟಕ ಜೆಎಸ್‌ಡಬ್ಲ್ಯು ಫೌಂಡೇಷನ್
ಸಂಡೂರು: ಮೊಬೈಲ್ ಆರೋಗ್ಯ ಘಟಕಗಳಿಂದ ಗ್ರಾಮೀಣ ಜನರು ಅಗತ್ಯ ಆರೋಗ್ಯ ಸೇವೆಗಳನ್ನು ಪಡೆಯಲು ಸಾಧ್ಯವಾಗುತ್ತಿದ್ದು, ತಾಲೂಕು ಸಾರ್ವಜನಿಕ ಆಸ್ಪತ್ರೆಯ ಮೇಲಿನ ರೋಗಿಗಳ ಒತ್ತಡವೂ ಕಡಿಮೆಯಾಗುತ್ತದೆ ಎಂದು ಶಾಸಕಿ ಅನ್ನಪೂರ್ಣ ತುಕಾರಾಮ್ ಹೇಳಿದರು.
ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಜೆಎಸ್‌ಡಬ್ಲ್ಯು ಫೌಂಡೇಷನ್ ಒದಗಿಸಿದ ಮೊಬೈಲ್ ಆರೋಗ್ಯ ಘಟಕಗಳನ್ನು ಉದ್ಘಾಟಿಸಿ ಮಾತನಾಡಿದರು. ಸ್ಥಳೀಯ ಸಮುದಾಯದ ಆರೋಗ್ಯ ಮತ್ತು ಕಲ್ಯಾಣಕ್ಕಾಗಿ ಜೆಎಸ್‌ಡಬ್ಲ್ಯು ಫೌಂಡೇಷನ್ ನಿರಂತರ ಸೇವೆ ಒದಗಿಸುತ್ತಿದೆ. ಪ್ರತಿ ಮೊಬೈಲ್ ಆರೋಗ್ಯ ಘಟಕದಲ್ಲಿ ವೈದ್ಯರು, ಔಷಧಕಾರರು ಹಾಗೂ ರೋಗಿಗಳ ಸಹಾಯಕರನ್ನು ಒಳಗೊಂಡ ತಂಡ ಕಾರ್ಯನಿರ್ವಹಿಸುತ್ತಿದೆ. ಸಮಾಜ ಸೇವಕರ ಮೇಲ್ವಿಚಾರಣೆಯಲ್ಲಿ ಸೇವೆ ನೀಡಲಾಗುತ್ತಿದೆ. ಫಲಾನುಭವಿಗಳ ಮಾಹಿತಿ ಹಾಗೂ ಸೇವಾ ದಾಖಲೆಗಳನ್ನು ಮೊಬೈಲ್ ಅಪ್ಲಿಕೇಶನ್ ಮೂಲಕ ಡಿಜಿಟಲ್ ರೂಪದಲ್ಲಿ ದಾಖಲಿಸಲಾಗುತ್ತಿದ್ದು, ಇದರಿಂದ ಸೇವೆಗಳ ಉತ್ತಮ ಮೇಲ್ವಿಚಾರಣೆ ಮತ್ತು ಮುಂದುವರಿದ ಅನುಸರಣೆಗೆ ಅನುಕೂಲವಾಗುತ್ತಿದೆ ಎಂದರು.
ಜೆಎಸ್‌ಡಬ್ಲ್ಯು ಫೌಂಡೇಷನ್‌ನ ದಕ್ಷಿಣ ಭಾರತ ವಲಯದ ಮುಖ್ಯಸ್ಥ ಪೆದ್ದಣ್ಣ ಬಿಡಲಾ ಮಾತನಾಡಿ, ಸಂಡೂರು ತಾಲೂಕಿನ ಹಳ್ಳಿಗಳಲ್ಲಿ ಮೊಬೈಲ್ ಆರೋಗ್ಯ ಘಟಕಗಳ ಸೇವೆಗಾಗಿ ಜೆಎಸ್‌ಡಬ್ಲ್ಯು ಫೌಂಡೇಷನ್1.5 ಕೋಟಿ ರೂ. ವ್ಯಯಿಸುತ್ತಿದೆ. ಆರೋಗ್ಯ ಸಂಚಾರಿ ಘಟಕಗಳ ನಿಗದಿತ ಭೇಟಿಯ ದಿನಾಂಕಗಳು ಹಾಗೂ ಲಭ್ಯವಿರುವ ಆರೋಗ್ಯ ಸೇವೆಗಳ ಕುರಿತು ಹೆಚ್ಚಿನ ಅರಿವು ಮೂಡಿಸುವುದಾಗಿದೆ ಎಂದರು. ಜೆಎಸ್‌ಡಬ್ಲ್ಯು ಮುಖ್ಯಸ್ಥೆ ಭಾರತಿ ಪಳನಿಸ್ವಾಮಿ, ಆರೋಗ್ಯ ಮತ್ತು ಪೌಷ್ಟಿಕಾಂಶ ವಿಭಾಗದ ಪ್ರಧಾನ ವ್ಯವಸ್ಥಾಪಕ ಡಾ.ಆಶೀಶ್ ಜೈನ್, ಎಚ್‌ಆರ್‌ನ ಡಿಜಿಎಂ ಕಿರಣ್ ಗೋವಿಂದ್, ಶ್ರೀಕಾಂತ ಹೆಗ್ಡೆ, ಪ್ರಭಾರ ಟಿಎಚ್‌ಒ ಡಾ.ಹರೀಶ್, ಅಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಸಂಚಾರಿ ಆರೋಗ್ಯ ಘಟಕಗಳ ಸಿಬ್ಬಂದಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net