ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಿ

  ಫಸಲ್ ಬಿಮಾ ಯೋಜನೆಯಲ್ಲಿ ಮಧ್ಯವರ್ತಿಗಳ ಹಾವಳಿ ಖಂಡಿಸಿ ಹರಪನಹಳ್ಳಿ ತಾಲೂಕಿನ ಹಾರಕನಾಳು ಗ್ರಾಮದಲ್ಲಿ ತಹಸೀಲ್ದಾರ್ ಬಿ.ವಿ.ಗಿರೀಶ್ ಬಾಬುಗೆ ಅಖಿಲ ಭಾರತ ಕಿಸಾನ್ ಸಭಾದಿಂದ ಮನವಿ ಸಲ್ಲಿಸಲಾಯಿತು. ತಾಪಂ ಇಒ ವೈ.ಎಚ್ ಚಂದ್ರಶೇಖರ್, ಕೃಷಿ ಅಧಿಕಾರಿಗಳಾದ ತಳಕಲ್ ನಾಗನಗೌಡ, ಸಂಗಪ್ಪ, ಪಿಡಿಒ ಶಿವಪ್ಪ, ಕಾರ್ಯದರ್ಶಿ ಲಕ್ಷ್ಮೀಕಾಂತ ಇತರರಿದ್ದರು.

Published on
ಹರಪನಹಳ್ಳಿ: ಫಸಲ್ ಬಿಮಾ ಯೋಜನೆಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಿದ್ದು, ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಅಖಿಲ ಭಾರತ ಕಿಸಾನ್ ಸಭಾ ಜಿಲ್ಲಾಧ್ಯಕ್ಷ ಗುಡಿಹಳ್ಳಿ ಹಾಲೇಶ್ ಆರೋಪಿಸಿದರು.
ಹಾರಕನಾಳು ಗ್ರಾಮದಲ್ಲಿ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಮಾತನಾಡಿದರು. ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಬೇಕು. ವಿಮೆ ಹಣವನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡಬೇಕು, ಫಸಲ್ ಬಿಮಾ ಯೋಜನೆ ಉದ್ದೇಶ ರೈತರ ಸಂಕಷ್ಟ ಪರಿಹರಿಸುವುದಾಗಿದೆ ಹೊರತು ಮಧ್ಯವರ್ತಿಗಳ ಲಾಭಕ್ಕಾಗಿ ಅಲ್ಲವೆಂದು ಹೇಳಿದರು.
ತಾಲೂಕು ಕಾರ್ಯದರ್ಶಿ ರಮೇಶ್ ನಾಯ್ಕ ಮಾತನಾಡಿ, ಪ್ರಕೃತಿ ವಿಕೋಪಗಳಿಂದ ಆಗುವ ಬೆಳೆ ನಷ್ಟ ಭರ್ತಿಗೆ ಸರ್ಕಾರ ಅನುವು ಮಾಡಿಕೊಟ್ಟರೆ, ಆ ಹಣವನ್ನು ಮಧ್ಯವರ್ತಿಗಳು ದಂಧೆಯನ್ನಾಗಿಸಿಕೊಂಡು ದೋಚುತ್ತಿರುವುದು ಖಂಡನೀಯ ಎಂದರು. ಎಲ್.ಬಿ.ಹಾಲೇಶ್ ನಾಯ್ಕ, ಎಲ್.ಮಂಜ್ಯಾನಾಯ್ಕ, ಹಾವೇರಿ ಬಸವರಾಜ್, ಹುಲಿಕಟ್ಟಿ ವೀರೇಶ್, ಬಾಸು ಸಾಹೇಬ್, ಪುಟ್ಟಾನಾಯ್ಕ, ಎಲ್.ಬಿ.ಮಂಜ್ಯಾನಾಯ್ಕ, ಬದ್ಯಾನಾಯ್ಕ, ಹನುಮಂತ ನಾಯ್ಕ, ಲೋಕ್ಯಾನಾಯ್ಕ, ಶಶಿ ಪೂಜಾರ್, ಲಕ್ಕಪ್ಪ, ರಾಜಪ್ಪ, ಗೋಣಿ ಸ್ವಾಮಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net