ನೀಟ್ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಸಂಡೂರು ತಾಲೂಕು ಯುವ ಕಾಂಗ್ರೆಸ್ ಪದಾಧಿಕಾರಿಗಳು ತಹಸೀಲ್ದಾರ್ ಅನಿಲ್ ಕುಮಾರಗೆ ಮನವಿ ಸಲ್ಲಿಸಿದರು. ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ನಂದಿಹಳ್ಳಿ ಮಂಜುನಾಥ್, ತಾಲೂಕು ಅಧ್ಯಕ್ಷ ಬಸವರಾಜ್ ಬ್ರೂಸ್ಲಿ, ಜಿಲ್ಲಾ ಆಡ್ಮಿನ್ ಯು.ಕುಮಾರಸ್ವಾಮಿ, ಪ್ರಮುಖರಾದ ಶಿವಕುಮಾರ್, ಅಜಯ್ ಕುಮಾರ್ ಇತರರಿದ್ದರು.
ಸಂಡೂರು: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ಎನ್‌ಇಇಟಿ) ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದನ್ನು ಖಂಡಿಸಿ ತಾಲೂಕು ಯುವ ಕಾಂಗ್ರೆಸ್‌ನಿಂದ ಬುಧವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧ್ಯಕ್ಷ ನಂದಿಹಳ್ಳಿ ಮಂಜುನಾಥ್ ಮಾತನಾಡಿ, ನೀಟ್ ಪರೀಕ್ಷೆಗೆ ಮರು ಸಿದ್ಧತೆ ನಡೆಸಿ ಎಂದರೆ 22 ಲಕ್ಷ ವಿದ್ಯಾರ್ಥಿಗಳು ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ.
ಮೂರು ವರ್ಷಗಳಲ್ಲಿ ಎರಡನೇ ಬಾರಿ ವೈದ್ಯಕೀಯ ಶಿಕ್ಷಣದ ಕನಸು ಹೊತ್ತ ಲಕ್ಷಾಂತರ ವಿದ್ಯಾರ್ಥಿಗಳ ಜೀವನದ ಜತೆ ಕೇಂದ್ರ ಸರ್ಕಾರ ಆಟವಾಡಿದೆ. ಹೆಚ್ಚು ಹಣ ನೀಡಿದವರಿಗೆ ಪ್ರಶ್ನೆ ಪತ್ರಿಕೆ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳಿವೆ.
ಪ್ರಶ್ನೆ ಪತ್ರಿಕೆ ಸೋರಿಕೆಗೆ ಕಾರಣವಾದವರನ್ನು ಶಿಕ್ಷೆಗೆ ಒಳಪಡಿಸಬೇಕು. ಎನ್‌ಟಿಎ ಸಂಸ್ಥೆಯನ್ನು ಕೂಡಲೇ ವಜಾ ಮಾಡಬೇಕು ಎಂದು ಒತ್ತಾಯಿಸಿದರು.
ತಾಲೂಕು ಅಧ್ಯಕ್ಷ ಬಸವರಾಜ್ ಬ್ರೂಸ್ಲಿ, ಜಿಲ್ಲಾ ಆಡ್ಮಿನ್ ಯು.ಕುಮಾರಸ್ವಾಮಿ, ಪ್ರಮುಖರಾದ ಶಿವಕುಮಾರ್, ಅಜಯ್ ಕುಮಾರ್, ಮದರ್ ಬಾಷಾ, ದೇವರಾಜ್, ಮೌಲಾಹುಸೇನ್, ಶ್ರೀನಿವಾಸ್, ಕೆ.ಕಾರ್ತಿಕ್, ರಾಮಾಂಜಿನಿ ಇತರರಿದ್ದರು.