ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಪಕ್ಷದ ಉದ್ಘಾಟನೆ, ಕಾರ್ಯಕರ್ತರ ಪಕ್ಷ ಸೇರ್ಪಡೆ ಹಾಗೂ ಜಿಲ್ಲಾ ಕಚೇರಿ ಉದ್ಘಾಟನೆ ನಡೆಯಲಿದೆ. ಜನರಿಂದ, ಜನರಿಗಾಗಿ ಮತ್ತು ಜನರಿಗೋಸ್ಕರ ಎಂಬ ಆಶಯದೊಂದಿಗೆ ಪಕ್ಷವು ಜನಪರ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಿದೆ. ಒಂದು ದಿನದ ಸಂಭ್ರಮವಲ್ಲ, 365 ದಿನಗಳ ಜನಸೇವೆಯೇ ನಮ್ಮ ಸಂಕಲ್ಪ ಎಂಬ ಧ್ಯೇಯದೊಂದಿಗೆ ನಡೆಸಲಾಗುವುದು ಎಂದರು. ಮುಖಂಡರಾದ ವೆಂಕಟೇಶ್, ತಿಪ್ಪೇಸ್ವಾಮಿ, ರಾಘವೇಂದ್ರ, ಪದ್ಮಾವತಿ, ಶಾಂತಿ, ಸಂತೋಷ್ ಇದ್ದರು.