ನಾಡಿನ ಸಂಸ್ಕೃತಿ-ಪಾವಿತ್ರೃ ಕಾಪಾಡಿ

ಹೂವಿನಹಡಗಲಿ ತಾಲೂಕಿನ ಕಾಂತೇಬೆನ್ನೂರು ಗ್ರಾಮದಲ್ಲಿ ಶ್ರೀ ಮೈಲಮ್ಮದೇವಿ ಶ್ರೀ ಸಿದ್ಧಿ ವಿನಾಯಕ ಜೋಡಿ ರಥೋತ್ಸವದ ನಿಮಿತ್ತ ಆಯೋಜಿಸಿದ್ದ ಉಚಿತ ಸಾಮೂಹಿಕ ವಿವಾಹ ಮತ್ತು ಜನಜಾಗೃತಿ ಧರ್ಮ ಕಾರ್ಯಕ್ರಮವನ್ನು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಉದ್ಘಾಟಿಸಿದರು. ಮೈಲಮ್ಮದೇವಿ ಸಮಾಜಮುಖಿ ತ್ರಿವಿಧ ದಾಸೋಹ ಟ್ರಸ್ಟ್ ಧರ್ಮಾಧಿಕಾರಿ ಮಂಜುನಾಥ, ಶಿವಲಿಂಗ ರುದ್ರಮುನಿ ಸ್ವಾಮೀಜಿ, ಗುರುಶಾಂತೇಶ್ವರ ಸ್ವಾಮೀಜಿ, ಮಳೆಯೋಗೀಶ್ವರ ಸ್ವಾಮೀಜಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • Public Awareness

ನಾಡಿನ ಸಂಸ್ಕೃತಿ-ಪಾವಿತ್ರೃ ಕಾಪಾಡಿ

ರಂಭಾಪುರಿ ಜಗದ್ಗುರುಗಳ ಆಶೀರ್ವಚನ ಸಾಮೂಹಿಕ ವಿವಾಹ ಕಾರ್ಯಕ್ರಮ

ಹೂವಿನಹಗಡಲಿ: ಭಾರತೀಯ ಪುಣ್ಯ ಭೂಮಿಯಲ್ಲಿರುವ ಅನೇಕ ಆಚರಣೆಗಳು ನಮ್ಮ ಸಂಸ್ಕೃತಿಯನ್ನು ಕಟ್ಟಿಕೊಡುತ್ತವೆ. ಸಂಸ್ಕೃತಿಯ ಪುನರುತ್ಥಾನಕ್ಕೆ ಧರ್ಮಾಚರಣೆಗಳು ಅವಶ್ಯವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ಕಾಂತೇಬೆನ್ನೂರಿನಲ್ಲಿ ಶ್ರೀ ಮೈಲಮ್ಮದೇವಿ-ಶ್ರೀ ಸಿದ್ಧಿ ವಿನಾಯಕ ಜೋಡಿ ರಥೋತ್ಸವ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಉಚಿತ ಸಾಮೂಹಿಕ ವಿವಾಹ ಮತ್ತು ಜನಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಎಲ್ಲ ಜಾತಿ, ಜನಾಂಗದವರು ಈ ನಾಡಿನ ಸಂಸ್ಕೃತಿ, ಪಾವಿತ್ರೃ ಕಾಪಾಡಬೇಕು. ಮಾನವೀಯ ಮೌಲ್ಯಗಳು ನಮ್ಮ ಆಚರಣೆಯಲ್ಲಿದ್ದು, ಹಿಂಸೆ, ಅಸಮಾಧಾನ, ಅತೃಪ್ತಿ ತೊರೆದರೆ ನೈಜ ಧರ್ಮನಿಷ್ಠರಾಗಲು ಸಾಧ್ಯ. ಮನುಷ್ಯನಿಗೆ ಆದರ್ಶ, ಸಂಸ್ಕಾರಗಳ ಅವಶ್ಯವಿದೆ. ವೀರಶೈವ ಧರ್ಮ ಸಕಲರಿಗೂ ಸದಾ ಒಳ್ಳೆಯದನ್ನೇ ಬಯಸುತ್ತಾ ಬಂದಿದೆ ಎಂದರು.
ಸಾಮೂಹಿಕ ವಿವಾಹದಲ್ಲಿ ಏಳು ಜೋಡಿಗಳು ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದವು. ಸಮಾರಂಭಕ್ಕೂ ಮುನ್ನ ಶ್ರೀ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಸಡಗರದಿಂದ ಜರುಗಿತು.ಮೈಲಮ್ಮದೇವಿ ಸಮಾಜಮುಖಿ ತ್ರಿವಿಧ ದಾಸೋಹ ಟ್ರಸ್ಟ್ ಧರ್ಮಾಧಿಕಾರಿ ಮಂಜುನಾಥ, ಹಂಪಸಾಗರ, ನವಲಿ ಹಿರೇಮಠದ ಶಿವಲಿಂಗ ರುದ್ರಮುನಿ ಸ್ವಾಮೀಜಿ, ನೆಗಳೂರು ಹಿರೇಮಠದ ಗುರುಶಾಂತೇಶ್ವರ ಸ್ವಾಮೀಜಿ, ಮಾನಿಹಳ್ಳಿ ಪುರವರ್ಗಮಠದ ಮಳೆಯೋಗೀಶ್ವರ ಸ್ವಾಮೀಜಿ, ಅಂಗೂರು ಹಿರೇಮಠದ ಶಿವಯೋಗಿ ಶಿವಾಚಾರ್ಯರು, ಮುತ್ತಿಗಿ ಸದ್ಗುರು ಅಜ್ಜಯ್ಯ ಹಾಲಸ್ವಾಮೀಜಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net