ನಿವೇಶನ-ವಸತಿ ಸೌಲಭ್ಯ ಕಲ್ಪಿಸಲಿ

ಕಂಪ್ಲಿ ತಹಸಿಲ್ ಕಚೇರಿ ಸಭಾಂಗಣದಲ್ಲಿ ಸವಿತಾ ಮಹರ್ಷಿ ಜಯಂತ್ಯುತ್ಸವ ಆಚರಿಸಲಾಯಿತು. ತಹಸೀಲ್ದಾರ್ ಜೂಗಲ ಮಂಜುನಾಯಕ, ಪ್ರಮುಖರಾದ ಎ.ಹನುಮಂತ, ಪಿ.ಪಾಂಡುರಂಗ, ಎಚ್.ಈರಣ್ಣ, ಜಿ.ಪಂಪಾಪತಿ, ಎಸ್.ಡಿ.ರಮೇಶ ಇತರರಿದ್ದರು.
ಕಂಪ್ಲಿ ತಹಸಿಲ್ ಕಚೇರಿ ಸಭಾಂಗಣದಲ್ಲಿ ಸವಿತಾ ಮಹರ್ಷಿ ಜಯಂತ್ಯುತ್ಸವ ಆಚರಿಸಲಾಯಿತು. ತಹಸೀಲ್ದಾರ್ ಜೂಗಲ ಮಂಜುನಾಯಕ, ಪ್ರಮುಖರಾದ ಎ.ಹನುಮಂತ, ಪಿ.ಪಾಂಡುರಂಗ, ಎಚ್.ಈರಣ್ಣ, ಜಿ.ಪಂಪಾಪತಿ, ಎಸ್.ಡಿ.ರಮೇಶ ಇತರರಿದ್ದರು.
Published on
ಕಂಪ್ಲಿ: ಸವಿತಾ ಸಮುದಾಯವನ್ನು ಎಸ್ಟಿಗೆ ಸೇರಿಸುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಆಸಕ್ತಿ ತೋರಬೇಕು ಎಂದು ಸವಿತಾ ಸಮಾಜದ ನಗರ ಘಟಕ ಅಧ್ಯಕ್ಷ ಎ.ಹನುಮಂತ ಒತ್ತಾಯಿಸಿದರು.
ತಹಸಿಲ್ ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಸವಿತಾ ಮಹರ್ಷಿ ಜಯಂತ್ಯುತ್ಸವದಲ್ಲಿ ಭಾನುವಾರ ಮಾತನಾಡಿದರು. ಸವಿತಾ ಸಮುದಾಯದವರು ನಾನಾ ಕ್ಷೇತ್ರಗಳಲ್ಲಿ ಹಿಂದುಳಿದಿದ್ದು, ಸಾಮಾಜಿಕ ಅಸಮಾನತೆ ಅನುಭವಿಸುತ್ತಿದ್ದಾರೆ. ಪಟ್ಟಣದಲ್ಲಿ ಸವಿತಾ ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ಒದಗಿಸಬೇಕು. ಸವಿತಾ ಸಮುದಾಯದವರಿಗೆ ನಿವೇಶನ, ವಸತಿ ಹಾಗೂ ವಿವಿಧ ಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಿದರು. 
ಮುಖ್ಯಶಿಕ್ಷಕ ಬಡಿಗೇರ ಜಿಲಾನ್ ಸಾಬ್ ಮಾತನಾಡಿ, ಸವಿತಾ ಮಹರ್ಷಿಗಳು ದೇವಾನುದೇವತೆಗಳ ಕ್ಷೌರ ಸೇವೆ ಮಾಡುವ ಮೂಲಕ ಮುಖಕ್ಕೆ ಕಳೆ ತಂದುಕೊಡುತ್ತಿದ್ದರು. ಸವಿತಾ ಸಮುದಾಯದವರಿಂದ ಈ ಸೇವೆ ಇಂದಿಗೂ ಮುಂದುವರಿದಿದೆ. ಸವಿತಾ ಸಮುದಾಯದವರು ಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕು. ಸಂಘಟನೆ ಮತ್ತು ಹೋರಾಟದಿಂದ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದರು. 
ತಹಸೀಲ್ದಾರ್ ಜೂಗಲ ಮಂಜುನಾಯಕ, ಸವಿತಾ ಸಮಾಜದ ನಗರ ಘಟಕದ ಉಪಾಧ್ಯಕ್ಷ ಕೆ.ಶ್ರೀನಿವಾಸ್, ಖಜಾಂಚಿ ಕೆ.ಆನಂದ್, ಪ್ರಮುಖರಾದ ಪಿ.ಪಾಂಡುರಂಗ, ಎಚ್.ಈರಣ್ಣ, ಎನ್.ಶ್ರೀನಿವಾಸ್, ಎ.ಅಂಜಿನಪ್ಪ, ಗೋಪಾಲ, ಜಿ.ಎಚ್.ಗಾದಿಲಿಂಗಪ್ಪ, ಇಸಿಒ  ಟಿ.ಎಂ.ಬಸವರಾಜ, ಶಿರಸ್ತೇದಾರರಾದ ಜಿ.ಪಂಪಾಪತಿ, ಎಸ್.ಡಿ.ರಮೇಶ, ವಿಎಒ ಲಕ್ಷ್ಮಣನಾಯ್ಕ ಇತರರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net