ಬಳ್ಳಾರಿ : ನಗರದ ರೈಲು ನಿಲ್ದಾಣದಿಂದ ಗುಂತಕಲ್‌ಗೆ ರೈಲು ಸಂಚಾರ ಸೌಲಭ್ಯ ಹಾಗೂ ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಇಲ್ಲಿನ ರೈಲು ನಿಲ್ದಾಣದಲ್ಲಿ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯಿಂದ ರೈಲ್ವೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲೆಯ ಪ್ರಯಾಣಿಕರ ಅನುಕೂಲಕ್ಕಾಗಿ ಬಳ್ಳಾರಿ ನಗರದಿಂದ ಗುಂತಕಲ್‌ಗೆ ಸಂಚಾರಿಸಲು ದಿನಕ್ಕೆ ನಾಲ್ಕು ರೈಲುಗಳ ಕಲ್ಪಿಸಬೇಕು. ಕೊಲ್ಹಾಪುರ- ಬೆಳಗಾವಿ - ಮನಗೂರು ಎಕ್ಸ್‌ಪ್ರೆಸ್ ರೈಲು ಪುನರ್ ಪ್ರಾರಂಭಿಸಬೇಕು. ಬಳ್ಳಾರಿಯಿಂದ ಆಂಧ್ರದ ಆದೋನಿಗೆ ನೂತನ ರೈಲು ಸಂಪರ್ಕ ಕಲ್ಪಿಸಬೇಕು ಸೇರಿದಂತೆ ನಾನಾ ಬೇಡಿಕೆಗಳಿಗೆ ಒತ್ತಾಯಿಸಲಾಯಿತು.