ಸ್ಥಳೀಯರಿಗೆ ಉದ್ಯೋಗಾವಕಾಶ ನೀಡಲಿ

ಸಂಡೂರು ಎನ್‌ಎಂಡಿಸಿಯಲ್ಲಿ ಸ್ಥಳೀಯರಿಗೆ ಕೆಲಸ ನೀಡುವಂತೆ ಒತ್ತಾಯಿಸಿ ಸಂಸದ ಈ.ತುಕಾರಾಮ್‌ಗೆ ಮನವಿ ಸಲ್ಲಿಸಲಾಯಿತು. ಕರವೇ ಜಿಲ್ಲಾಧ್ಯಕ್ಷ ರಾಜಶೇಖರ್, ತಾಲೂಕು ಅಧ್ಯಕ್ಷ ಪಿ.ರಾಜು ಪಾಳೇಗಾರ, ಉಪಾಧ್ಯಕ್ಷ ರವಿ, ಕಾರ್ಯದರ್ಶಿ ದೇವಾನಂದ, ಮೌಲಾಲಿ, ರಾಜಾವಲಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಕಾರಣ
  • ಗುತ್ತಿಗೆ
  • ಕಾರ್ಮಿಕ
ಸಂಡೂರು: ತಾಲೂಕಿನ ಎನ್‌ಎಂಡಿಸಿ ಕುಮಾರಸ್ವಾಮಿ ಗಣಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುವ ಕಾರ್ಮಿಕರನ್ನು ಮುಂದುವರಿಸುವಂತೆ ಆಗ್ರಹಿಸಿ ಕರವೇ ಕಾರ್ಯಕರ್ತರು ಸಂಸದ ಈ.ತುಕಾರಾಮ್‌ಗೆ ಮನವಿ ಸಲ್ಲಿಸಿದರು.
ತಾಲೂಕು ಅಧ್ಯಕ್ಷ ಪಿ.ರಾಜು ಪಾಳೆಗಾರ ಮಾತನಾಡಿ, ಎನ್‌ಎಂಡಿಸಿ ಕುಮಾರಸ್ವಾಮಿ ಗಣಿಯಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದ ಖಾಸಗಿ ಸಂಸ್ಥೆ ಕೆಲಸದ ಅವಧಿ ಮುಗಿದಿದೆ ಎಂಬ ಕಾರಣಕ್ಕೆ ಗುತ್ತಿಗೆ ಕಾರ್ಮಿಕರನ್ನು ಕೆಲಸದಿಂದ ಕೈಬಿಡಲಾಗಿತ್ತು. ಇದೀಗ ಹೊಸದಾಗಿ ಗುತ್ತಿಗೆ ಪಡೆದ ಕಂಪನಿಯು ಸ್ಥಳೀಯ ಕಾರ್ಮಿಕರನ್ನು ಗುತ್ತಿಗೆ ಕೆಲಸದಿಂದ ಕೈಬಿಟ್ಟು ಹೊರ ರಾಜ್ಯದವರನ್ನು ಗುತ್ತಿಗೆ ಕಾರ್ಮಿಕರನ್ನಾಗಿ ಪಡೆದು ಸ್ಥಳೀಯರಿಗೆ ಅನ್ಯಾಯ ಮಾಡಿದೆ ಎಂದರು.
ತಹಸಿಲ್ ಕಚೇರಿ ಶಿರಸ್ತೇದಾರ್ ಕೆ.ಎಂ.ಶಿವಕುಮಾರ, ಎನ್‌ಎಂಡಿಸಿಯ ಜಿಎಂ ವೇಲು ವಸಂತ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net