ಹರಪನಹಳ್ಳಿ: ಹಡಪದ ಅಪ್ಪಣ್ಣೇಶ್ವರ ದೇವಾಲಯ ಪಕ್ಕದಲ್ಲಿರುವ ಉದ್ಯಾನದಲ್ಲಿ ಮೂಲ ಸೌಲಭ್ಯ ಕಲ್ಪಿಸಬೇಕೆಂದು ನಗರಸಭೆ ಪೌರಾಯುಕ್ತೆ ರೇಣುಕಾ ಎಸ್ ದೇಸಾಯಿಗೆ ನಿವಾಸಿಗಳು ಶನಿವಾರ ಮನವಿ ಸಲ್ಲಿಸಿದರು.
ಉದ್ಯಾನದಲ್ಲಿ ಮಕ್ಕಳ ಆಟಿಕೆಗಳಾದ ಜೋಕಾಲಿ, ಜಾರುಬಂಡೆ, ಬಾತುಕೋಳಿ ಹಾಗೂ ವ್ಯಾಯಾಮದ ಉಪಕರಣಗಳು ಹಾಳಾಗಿವೆ. ಸ್ಥಳೀಯರು ವಾಯುವಿಹಾರಕ್ಕೆ ಬಂದು ಕುಳಿತುಕೊಳ್ಳಲು ಸಮರ್ಪಕ ಆಸನದ ವ್ಯವಸ್ಥೆಯಿಲ್ಲ. ಹಾಳಾದ ಪರಿಕರಗಳನ್ನು ಬದಲಿಸಿ ಸೌಲಭ್ಯ ಕಲ್ಪಿಸಿಕೊಡಬೇಕೆಂದು ಮನವಿ ಸಲ್ಲಿಸಲಾಯಿತು.