ಸಮರ್ಪಕ ವಿದ್ಯುತ್ ಪೂರೈಸಲಿ

ಹೂವಿನಹಡಗಲಿ ನವಲಿ ಭಾಗದ ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಸುವಂತೆ ರೈತರು ಜೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಜೆಸ್ಕಾಂ ಎಇಇ ಕೇದಾರನಾಥ, ಎಸ್‌ಒ ರಾಜಶೇಖರ, ರೈತರಾದ ಪ್ರತಾಪ್ ಗಡಿಗಿ, ಕೊಂಬಳಿ ಬಸವರಾಜ, ಗೌಡ್ರು ಚಂದ್ರಪ್ಪ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ರೈತರ
  • ಮುತ್ತಿಗೆ
  • ವಿದ್ಯುತ್
ಹೂವಿನಹಡಗಲಿ: ನವಲಿ ಭಾಗದ ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಸುವಂತೆ ರೈತರು ಗುರುವಾರ ಜೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ರೈತ ಪ್ರತಾಪ್ ಗಡಿಗಿ ಮಾತನಾಡಿ, ಕಳೆದ ಕೆಲವು ದಿನಗಳಿಂದ ವಿದ್ಯುತ್ ಕಡಿತ ಹಾಗೂ ನಿಗದಿತ ವೇಳೆಗೆ ವಿದ್ಯುತ್ ಪೂರೈಕೆಯಾಗದ ಕಾರಣ ಬೆಳೆಗಳಿಗೆ ನೀರುಣಿಸಲು ತೊಂದರೆಯಾಗುತ್ತಿದೆ. ಬಿತ್ತನೆ ಮಾಡಿದ ಬೀಜಗಳು ಮೊಳಕೆ ಬಂದಿದ್ದು, ಜಮೀನಿನಲ್ಲಿ ನೀರು ಹರಿಸಲು ಆರಂಭಿಸುತ್ತಿದ್ದಂತೆ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಡಿತಗೊಳ್ಳಿಸುತ್ತಿದ್ದಾರೆ. ಈ ರೀತಿ ಮಾಡಿದರೆ ನಾವು ಹೇಗೆ ಕೃಷಿ ಕಾರ್ಯ ನಡೆಸಬೇಕು. ಭತ್ತದ ಗದ್ದೆಯ ಮಾಲೀಕರು ವಿದ್ಯುತ್ ಇಲಾಖೆಯ ಕೆಲ ಅಧಿಕಾರಿಗಳಿಗೆ ಹಣ ನೀಡುತ್ತಿದ್ದಾರೆ. ಅವರಿಗೆ ಮಾತ್ರ ಸಮರ್ಪಕ ವಿದ್ಯುತ್ ಪೂರೈಕೆ ಮಾಡುತ್ತಾರೆ ಎಂದು ದೂರಿದರು.
ರೈತ ಕೊಂಬಳಿ ಬಸವರಾಜ ಮಾತನಾಡಿ, ನಾವು ವಿದ್ಯುತ್ ಪೂರೈಕೆ ಮಾಡಿ ಎಂದು ಕರೆ ಮಾಡಿದರೆ ನಿಮ್ಮ ಮೇಲೆ ಮೊಕದ್ದಮೆ ದಾಖಲಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು. ರೈತರಾದ ಮಲ್ಲಪ್ಪ, ನಿಂಗಪ್ಪ, ಕಾರ್ತಿಕ್, ಗೌಡ್ರು ಚಂದ್ರಪ್ಪ, ಮಂಜು, ಗುರುಬಸವರಾಜ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net