ಮರಾಠ ಸಮುದಾಯ ಭವನಕ್ಕೆ ನಿವೇಶನ ನೀಡಲಿ

ಕಂಪ್ಲಿಯಲ್ಲಿ ಕರ್ನಾಟಕ ಮರಾಠ ಕ್ಷತ್ರಿಯ ಸಮಾಜದಿಂದ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರ ಮೆರವಣಿಗೆ ನಡೆಯಿತು. ಪ್ರಮುಖರಾದ ಆರೇರು ಗಣೇಶ ಮೌರ್ಯ, ರಮೇಶ ಸಿಂಧೆ, ಎಂ.ನಾರಾಯಣಸ್ವಾಮಿ, ಎನ್.ಎಂ.ಪತ್ರಯ್ಯಸ್ವಾಮಿ, ಜಂಗಾ ನಾಗರಾಜ ಇತರರಿದ್ದರು.
ಕಂಪ್ಲಿಯಲ್ಲಿ ಕರ್ನಾಟಕ ಮರಾಠ ಕ್ಷತ್ರಿಯ ಸಮಾಜದಿಂದ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರ ಮೆರವಣಿಗೆ ನಡೆಯಿತು. ಪ್ರಮುಖರಾದ ಆರೇರು ಗಣೇಶ ಮೌರ್ಯ, ರಮೇಶ ಸಿಂಧೆ, ಎಂ.ನಾರಾಯಣಸ್ವಾಮಿ, ಎನ್.ಎಂ.ಪತ್ರಯ್ಯಸ್ವಾಮಿ, ಜಂಗಾ ನಾಗರಾಜ ಇತರರಿದ್ದರು.
Published on
ಕಂಪ್ಲಿ: ಪಟ್ಟಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಸ್ಥಾಪಿಸುವಲ್ಲಿ ಪುರಸಭಾಡಳಿತ ಮುಂದಾಗಬೇಕು ಎಂದು ಕರ್ನಾಟಕ ಮರಾಠ ಕ್ಷತ್ರಿಯ ಸಮಾಜದ ತಾಲೂಕು ಅಧ್ಯಕ್ಷ ಆರೇರು ಗಣೇಶ ಮೌರ್ಯ ಒತ್ತಾಯಿಸಿದರು.
ಕೋಟೆ ಪಂಪಾಪತಿ ದೇವಸ್ಥಾನದಿಂದ ಆರಂಭಗೊಂಡ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿ ಶುಕ್ರವಾರ ಮಾತನಾಡಿದರು. ಪಟ್ಟಣದಲ್ಲಿ ಛತ್ರಪತಿ ಶಿವಾಜಿ ಹೆಸರಿನ ವೃತ್ತ ನಿರ್ಮಿಸಬೇಕು. ಮರಾಠ ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ಒದಗಿಸಬೇಕು. ಮರಾಠರಿಗೆ ಪ್ರವರ್ಗ 3ರ ಬದಲಿಗೆ ಪ್ರವರ್ಗ 2ಎ ಮೀಸಲು ಒದಗಿಸುವಲ್ಲಿ ರಾಜ್ಯ ಸರ್ಕಾರ ಮುಂದಾಗಬೇಕು. ಮರಾಠ ಅಭಿವೃದ್ಧಿ ನಿಗಮದ ಅನುದಾನ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಮರಾಠ ಸಮುದಾಯದ ಪ್ರಮುಖರಾದ ರಮೇಶ ಸಿಂಧೆ, ಎಂ.ನಾರಾಯಣಸ್ವಾಮಿ, ಸುಭಾಷ್ ಕುಕನೂರು, ಬಸವರಾಜ, ಜಡೇಶ, ಹಿಂದೂ ಮಹಾಸಭಾ ಪ್ರಮುಖರಾದ ಎನ್.ಎಂ.ಪತ್ರಯ್ಯಸ್ವಾಮಿ, ಜಂಗಾ ನಾಗರಾಜ, ಸುನೀಲ್ ರಾವ್, ಗೋವಿಂದ, ಕೃಷ್ಣಪ್ರಸಾದ್, ಎಂ.ಪ್ರಸನ್ನ, ಕಿಶೋರ, ರಮೇಶ, ನಾಗರಾಜ, ಮಹೇಶ್, ಸದಾನಂದ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net