ಪ್ರಗತಿ ಸಾಧಿಸದಿದ್ದರೆ ಧರಣಿ

ರಾಮುಲು
ರಾಮುಲು
Published on

ಪ್ರಮುಖ ಮುಖ್ಯಾಂಶಗಳು

  • ಅಮೆಗಾತಿ
ಬಳ್ಳಾರಿ : ತುಂಗಭದ್ರ ಜಲಾಶಯದ ಕ್ರಸ್ಟ್‌ಗೇಟ್‌ಗಳ ಅಳವಡಿಕೆ ಅಮೆಗಾತಿಯಲ್ಲಿ ಸಾಗುತ್ತಿದ್ದು, ಫೆಬ್ರವರಿ ಅಂತ್ಯದೊಳಗೆ ಶೇ. 20ರಷ್ಟು ಪಗ್ರತಿ ಸಾಧಿಸದಿದ್ದರೆ ಮಾರ್ಚ್ ತಿಂಗಳಿಂದ ಧರಣಿ ನಡೆಸಲಾಗುವುದು ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು.
ನಗರದಲ್ಲಿ ಶನಿವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕ್ರಸ್ಟ್‌ಗೇಟ್‌ಗಳ ಅಳವಡಿಕೆ ಪ್ರಾರಂಭವಾಗಿ ಎರಡು ತಿಂಗಳು ಕಳೆದಿದೆ. ಆದರೆ, ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧಿಸಿಲ್ಲ. ಕೂಡಲೇ, ರಾಜ್ಯ ಸರ್ಕಾರ ಎಚ್ಚೇತ್ತುಕೊಳ್ಳಬೇಕು. ಇಲ್ಲದಿದ್ದರೆ ತುಂಗಭದ್ರ ಜಲಾಶಯದ ಬಳಿಯಲ್ಲಿ ಅನಿರ್ದಿಷ್ಠಾವಧಿ ಧರಣಿ ಹಮ್ಮಿಕೊಳ್ಳಲಾಗುವುದು. ರಾಜ್ಯದ ನಾನಾ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಉತ್ಸವ ನಡೆಯುತ್ತಿವೆ. ಆದರೆ, ಜನಪ್ರತಿನಿಧಿಗಳಿಗೆ ಆಸಕ್ತಿ ಕೊರತೆಯಿಂದ ಜಿಲ್ಲಾಮಟ್ಟದಲ್ಲಿ ಯಾವ ಉತ್ಸವ ನಡೆಯುತ್ತಿಲ್ಲ. ಕಲಾವಿದರೆ ಉತ್ಸವ ನಡೆಸಿದರೆ ಅದಕ್ಕೆ ಸಂಪೂರ್ಣ ಬೆಂಬಲ ನೀಡಲಾಗುವುದು. ತಾಲೂಕಿನ ರೂಪನಗುಡಿ ಗ್ರಾಮದಲ್ಲಿ ಅಧಿಕಾರಿಗಳು ವಶಪಡಿಸಿಕೊಂಡಿರುವ ಜೋಳ ಅಕ್ರಮವಾಗಿದ್ದರೆ ತಪ್ಪಿಸ್ತರ ಮೇಲೆ ಕ್ರಮ ಜರುಗಿಸಲಿ. ರೈತರ ಬೆಳೆದಿರುವ ಜೋಳವಾದರೆ ಅವರಿಗೆ ಮರಳಿ ತಲುಪಿಸಲು ಅಧಿಕಾರಿಗಳು ಮುಂದಾಗಬೇಕು ಎಂದರು.
ಕೇಂದ್ರ ಸರ್ಕಾರ ಮಧ್ಯಮ ವರ್ಗಕ್ಕೆ ಹೊರೆಯಾಗದಂತೆ ಬಜೆಟ್ ಮಂಡಿಸಿದೆ. ವಿಕಸಿತ ಭಾರತಕ್ಕೆ ಪೂರಕವಾಗಿರುವ ಅಂಶಗಳು ಸೇರಿವೆ. ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಬಜೆಟ್ ಟೀಕಿಸುವ ಮುನ್ನ ಈವರೆಗೆ ಅವರು ಮಂಡಿಸಿದ ಬಜೆಟ್‌ಗಳು ಯಾರಿಗೆ ಅನುಕೂಲವಾಗಿವೆ ಎಂಬುದು ಅರಿತುಕೊಂಡು ಹೇಳಿಕೆ ನೀಡಬೇಕು ಎಂದು ತಿರುಗೇಟು ನೀಡಿದರು.
ರಾಜ್ಯ ಸರ್ಕಾರ ಮುಂಬರುವ ಚುನಾವಣೆಗಳಲ್ಲಿ ಸೋಲುವ ಭಯದ ಉದ್ದೇಶದಿಂದ ಗ್ರಾಪಂ ಹಾಗೂ ಜಿಬಿಎ ಚುನಾವಣೆಗಳಲ್ಲಿ ಇವಿಎಂ ನಿರಾಕರಿಸಿ, ಬ್ಯಾಲೆಟ್ ಪೇಪರ್ ಬಳಸುತ್ತಿದೆ ಎಂದು ವ್ಯಂಗ್ಯವಾಡಿದರು.
ಪಾಲಿಕೆ ಸದಸ್ಯರಾದ ಕೋನಂಕಿ ತಿಲಕ್, ಹನುಮಂತು, ಗುಡಿಗಂಟಿ ಹನುಮಂತು, ಅಶೋಕ, ಮುಖಂಡರಾದ ಪಿ.ಪಾಲಣ್ಣ, ವೀರಶೇಖರರೆಡ್ಡಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net