ಹೆದ್ದಾರಿ ತಡೆದು ಪ್ರತಿಭಟನೆ ಮಾ.7

ಯು.ಬಸವರಾಜ್
ಯು.ಬಸವರಾಜ್
Published on

ಪ್ರಮುಖ ಮುಖ್ಯಾಂಶಗಳು

  • ಕೈಗಾರಿಕಾ
ಬಳ್ಳಾರಿ : ಕೈಗಾರಿಕಾ ಸ್ಥಾಪನೆಗಾಗಿ ವಶಪಡಿಸಿಕೊಂಡ ಭೂಮಿಯ ನ್ಯಾಯಯುತ ಬೆಲೆಗಾಗಿ ಕೈಗೊಂಡ ಹೋರಾಟ ಸಾವಿರಕ್ಕೂ ಅಧಿಕ ದಿನ ಪೂರೈಸಿದರೂ ಸರ್ಕಾರ ನಿರ್ಲಕ್ಷೃ ವಹಿಸುತ್ತಿದ್ದು, ಮಾ.7ರಂದು ಕುಡುತಿನಿ ಹಾಗೂ ವೇಣಿವೀರಾಪುರದ ಬಳಿ ಹೆದ್ದಾರಿ ತಡೆ ಚಳವಳಿ ನಡೆಸಲಾಗುವುದು ಎಂದು ಭೂ ಸಂತ್ರಸ್ತರ ಹೋರಾಟ ಸಮಿತಿ ಗೌರವಾಧ್ಯಕ್ಷ ಯು.ಬಸವರಾಜ್ ಹೇಳಿದರು.
ನಗರ ಪತ್ರಿಕಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಅದೇ ರೀತಿಯಾಗಿ ಆಗಲೂ ಕೂಡ ಕ್ರಮವಹಿಸದೆ ಹೋದಲ್ಲಿ, ಜಿಲ್ಲೆಯ ನಾನಾ ಪ್ರಗತಿಪರ ಸಂಘ, ಸಂಸ್ಥೆಗಳು, ನಾಗರಿಕರು ಹಾಗೂ ರೈತ ಕೂಲಿ ಕಾರ್ಮಿಕರ ಬೆಂಬಲ ಪಡೆದು ಏ.7ರಂದು ಬಳ್ಳಾರಿ ಜಿಲ್ಲಾ ಸ್ವಯಂ ಪ್ರೇರಿತ್ ಬಂದ್ ನಡೆಸಲು ನಿರ್ಧರಿಸಲಾಗುವುದು ಎಂದು ಎಚ್ಚರಿಸಿದರು.
ಈಗಾಗಲೇ ಕುಡತಿನಿಯ ಸುತ್ತಲಿನ ಗ್ರಾಮಗಳಲ್ಲಿ ಸಾವಿರಾರು ಎಕರೆ ವಶಪಡಿಸಿಕೊಂಡು ರೈತರಿಗೆ ದೊಡ್ಡ ಕೈಗಾರಿಕೆಗಳನ್ನು ಸ್ಥಾಪಿಸಿ ಉದ್ಯೋಗ ನೀಡಲಾಗುವುದು ಎಂಬ ಭರವಸೆ ಮಣ್ಣು ಪಾಲು ಮಾಡಿದ್ದಾರೆ. ಇದರಿಂದ ರೈತರು ಅತಂಕಕ್ಕೆ ಈಡಾಗಿದ್ದಾರೆ. ಇತ್ತೀಚಿಗೆ ರಾಜ್ಯ ಸರ್ಕಾರ ಹೋರಾಟಕ್ಕೆ ಮಣಿದು ಸಿಎಂ ನೇತೃತ್ವದಲ್ಲಿ ಕೈಗಾರಿಕಾ ಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ, ಸಂಸದ ಹಾಗೂ ಶಾಸಕರ ಜತೆ ಸಭೆ ನಡೆಸಲಾಯಿತು. ಸಭೆಯಲ್ಲಿ ಅದಕ್ಕೆ ಸಂಬಂಧಿಸಿ ದಾಖಲಾತಿಗಳನ್ನು ನೀಡಬೇಕು ಎಂಬುದಾಗಿ ಸರ್ಕಾರ ಸೂಚಿಸಿತು. ಅದೇ ರೀತಿಯಲ್ಲಿ ಎಲ್ಲ ದಾಖಲಾತಿಗಳು ಒದಗಿಸಿ ಮೂರು ತಿಂಗಳು ಕಳೆದರೂ ಯಾವ ಕ್ರಮಕೈಗೊಂಡಿಲ್ಲ. ಕೂಡಲೇ ಸರ್ಕಾರ ಎಚ್ಚೇತ್ತುಕೊಳ್ಳದಿದ್ದರೆ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು. ಮುಖಂಡರಾದ ಚಂದ್ರಕುಮಾರಿ, ಜಿ.ಸತ್ಯಬಾಬು, ಆನಂದಕುಮಾರ್, ವೀರೇಶ್, ಜಗದೀಶ್ ಇತರರಿದ್ದರು
==
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net