ರಾಜ್ಯ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಜನರ ಮತದಾನದ ಹಕ್ಕು ರಕ್ಷಿಸಲು ಕ್ರಮ ಕೈಗೊಳ್ಳಬೇಕು. ಅಗತ್ಯವಿದ್ದರೆ ಸುಪ್ರೀಂ ಕೋರ್ಟ್ ಮೊರೆ ಹೋಗಬೇಕು. ಜತೆಗೆ ವಿಶೇಷ ಗ್ರಾಮಸಭೆ ಹಾಗೂ ವಾರ್ಡ್ ಸಭೆಗಳನ್ನು ಕರೆದು ಅರ್ಹ ಮತದಾರರಿಗೆ ಸ್ಮಾರ್ಟ್ ಕಾರ್ಡ್ ನೀಡಬೇಕು ಎಂದು ಒತ್ತಾಯಿಸಿದರು. ನಾನಾ ಸಂಘಟನೆ ಮುಖಂಡರಾದ ಸತ್ಯಬಾಬು, ಎಲ್.ಮಾರೆಣ್ಣ, ಶಿವಶಂಕರ್, ಮಾಧವ್‌ರೆಡ್ಡಿ, ಕರಿಯಪ್ಪ ಗುಡಿಮನಿ, ಬೋಯಪಾಟಿ ವಿಷ್ಣು ಇತರರಿದ್ದರು.