ಬಳ್ಳಾರಿಯ ಸಂಗಮ್ ವೃತ್ತದಲ್ಲಿ ಕೇಂದ್ರ ಸರ್ಕಾರ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಜಾರಿ ವಿಳಂಬ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಘಟಕದಿಂದ ಪ್ರತಿಭಟನೆ ನಡೆಯಿತು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್, ಪದಾಧಿಕಾರಿಗಳಾದ ಹುಮಯೂನ್ ಖಾನ್, ಎಂ.ಎಸ್.ಮಂಜುಳಾ, ಮಾಬೂಸಾಬ್, ಎಲ್. ಮಾರೆಣ್ಣ, ಮಾನಯ್ಯ, ನಾಗು, ಬಿ.ರುದ್ರಪ್ಪ, ಯಶೋಧ, ಗೌಸಿಯ, ಆಶಾಲತಾ, ಸುನಿತ ಇತರರಿದ್ದರು.
ಬಳ್ಳಾರಿ : ಕೇಂದ್ರ ಸರ್ಕಾರ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಜಾರಿ ವಿಳಂಬ ಖಂಡಿಸಿ, ಇಲ್ಲಿನ ಸಂಗಮ್ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ಘಟಕದಿಂದ ಮಂಗಳವಾರ ಪ್ರತಿಭಟನೆ ನಡೆಯಿತು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್ ಮಾತನಾಡಿ, ಮಹಿಳಾ ಮೀಸಲಾತಿ ಮಸೂದೆ ಯಾವುದೇ ಪೂರ್ವಭಾವಿ ಷರತ್ತುಗಳಿಲ್ಲದೆ ತಕ್ಷಣ ಜಾರಿಗೆ ತರಬೇಕು. ಮಹಿಳಾ ಮೀಸಲಾತಿ ಮಸೂದೆಯೊಳಗೆ ಇತರ ಹಿಂದುಳಿದ ವರ್ಗಗಳಿಗೆ ಉಪ ಮೀಸಲಾತಿ ಸೇರಿಸಬೇಕು, ಇದರಿಂದ ಸಾಮಾಜಿಕ ನ್ಯಾಯ ಸಾಧಿಸಲು ಸಾಧ್ಯವಾಗುತ್ತದೆ. 2026ರ ಜಾತಿ ಜನಗಣತಿಯ ನಿಖರ ದತ್ತಾಂಶದ ಆಧಾರದ ಮೇಲೆ ಕ್ಷೇತ್ರಗಳ ಮಿತಿ ನಿರ್ಣಯ ಮಾಡಬೇಕು. ನಿಖರ ದತ್ತಾಂಶದ ಆಧಾರದಲ್ಲೇ ನ್ಯಾಯಯುತ ಪ್ರಾತಿನಿಧ್ಯ ದೊರೆಯುತ್ತದೆ ಎಂದು ಅಭಿಪ್ರಾಯಪಟ್ಟರು. ಬಳಿಕ ಮಹಿಳಾ ಮುಖಂಡರು ಮಹಿಳಾ ಮೀಸಲಾತಿ ಮಸೂದೆ ತಕ್ಷಣ ಜಾರಿಗೆ ತರಬೇಕು ಎಂದು ಘೋಷಣೆ ಕೂಗಿದರು.