ನಗರದಲ್ಲಿ ಜಾನುವಾರುಗಳ ರಕ್ಷಣೆ

ಡಾ.ಸುಮನ್ ಡಿ.ಪನ್ನೇಕರ್
ಡಾ.ಸುಮನ್ ಡಿ.ಪನ್ನೇಕರ್
Published on

ಪ್ರಮುಖ ಮುಖ್ಯಾಂಶಗಳು

  • ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಎರಡು ಟಿಪ್ಪರ್ ಲಾರಿಗಳನ್ನು ವಶ
  • 45 ಜಾನುವಾರುಗಳನ್ನು ರಕ್ಷಿಸಲಾಗಿದೆ
ಬಳ್ಳಾರಿ : ಬಕ್ರೀದ್ ಹಬ್ಬದ ಹಿನ್ನೆಲೆ ಕಾನೂನುಬಾಹಿರವಾಗಿ ವಧೆ ಮಾಡಲು ಸಂಗ್ರಹಿಸಿಟ್ಟಿದ್ದ 45 ಜಾನುವಾರುಗಳನ್ನು ಕೌಲ್‌ಬಜಾರ್ ಠಾಣೆ ಪೊಲೀಸರು ರಕ್ಷಿಸಿದ್ದಾರೆ ಎಂದು ಎಸ್ಪಿ ಡಾ.ಸುಮನ್ ಡಿ.ಪನ್ನೇಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೌಲಬಜಾರ್ ನಿವಾಸಿ ಮೊಹಮ್ಮದ್ ಶಫಿ ಎಂಬುವವರ ಕೊಟ್ಟಿಗೆಯ ಮೇಲೆ ದಾಳಿ ನಡೆಸಿ, 18 ಎತ್ತುಗಳು, 26 ಹೋರಿ ಕರುಗಳು ಹಾಗೂ ಒಂದು ಎಮ್ಮೆಯ ಕರು ಸೇರಿ ಒಟ್ಟು 45 ಜಾನುವಾರುಗಳನ್ನು ರಕ್ಷಿಸಲಾಗಿದೆ. ಆರೋಪಿ ವಿರುದ್ಧ ಕೌಲಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನಗರದಲ್ಲಿ ಜೂಜಾಟ ಅಡ್ಡೆ ಮೇಲೆ ದಾಳಿ 14 ಆರೋಪಿಗಳನ್ನು ಬಂಧಿಸಿ, 19,700 ರೂ. ನಗದು ವಶಪಡಿಸಿಕೊಂಡು ಬ್ರೂಸ್‌ಪೇಟೆ ಹಾಗೂ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ನಗರದ ಹೊರವಲಯದ ಕಾರ್ಕಲತೋಟ ನಿವಾಸಿ 16 ವರ್ಷದ ನಂದಿನಿ ಎಂಬ ಬಾಲಕಿಯನ್ನು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಚಿಪ್ಪಗಿರಿ ಮೂಲದ ಲಾರಿ ಚಾಲಕ ಸೂರ್ಯ ಎಂಬಾತ ಅಪಹರಿಸಿರುವ ಬಗ್ಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ತಾಲೂಕಿನ ಹಗರಿ ನದಿಯಿಂದ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಎರಡು ಟಿಪ್ಪರ್ ಲಾರಿಗಳನ್ನು ವಶಕ್ಕೆ ಪಡೆದು 8,000 ಮೌಲ್ಯದ 8 ಕ್ಯೂಬಿಕ್ ಟನ್ ಮರಳು ಜಪ್ತಿ ಮಾಡಲಾಗಿದೆ. ಕರ್ಚೇಡು ಗ್ರಾಮದಲ್ಲಿ ಎರಡು ಆಕಳು ಕರುಗಳನ್ನು ಕಳ್ಳತನ ಮಾಡಿ ಸಾಗಿಸುತ್ತಿದ್ದ ಗಂಗಾಧರ, ವಲಿಭಾಷ ಮತ್ತು ಮಲ್ಲಯ್ಯ ಎಂಬ ಮೂವರನ್ನು ಬಂಧಿಸಿ, 27,000 ರೂ. ಮೌಲ್ಯದ ಎರಡು ಕರುಗಳನ್ನು ವಶಕ್ಕೆ ಪಡೆದು ಆರೋಪಿಗಳ ವಿರುದ್ಧ ಮೋಕಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
===
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net