ಮೇ14ರವರೆಗೆ ನಿಷೇಧಾಜ್ಞೆ ಜಾರಿ

ಮೇ14ರವರೆಗೆ ನಿಷೇಧಾಜ್ಞೆ ಜಾರಿ
ಮೇ14ರವರೆಗೆ ನಿಷೇಧಾಜ್ಞೆ ಜಾರಿ
Published on

ಪ್ರಮುಖ ಮುಖ್ಯಾಂಶಗಳು

  • ನಿಷೇಧಾಜ್ಞೆ
ಬಳ್ಳಾರಿ : ತಾಲೂಕಿನ ಕುಡುತಿನಿ ಕೈಗಾರಿಕಾ ಪ್ರದೇಶದ ಭೂಸ್ವಾಧೀನ ಪ್ರಕ್ರಿಯೆ ಮತ್ತು ಗಡಿ ಗುರುತಿಸುವಿಕೆ ವೇಳೆ ಭೂ ಸಂತ್ರಸ್ತ ರೈತರಿಂದ ಉಂಟಾಗಬಹುದಾದ ಪ್ರತಿಭಟನೆ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿ ರಕ್ಷಣೆಯ ದೃಷ್ಟಿಯಿಂದ ಕುಡತಿನಿ ಪಟ್ಟಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೇ7 ರಿಂದ ಮೇ14 ರ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಎಸಿ ಎಚ್.ಡಿ.ರಾಜೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿಷೇಧಾಜ್ಞೆ ಪ್ರದೇಶ : ಕುಡತಿನಿ, ಕೆಐಎಡಿಬಿ ವಶಪಡಿಸಿಕೊಂಡ ಪ್ರದೇಶ, ಬಳ್ಳಾರಿ ಬೈಪಾಸ್ ರಸ್ತೆಯಿಂದ ಸುಲ್ತಾನಪುರ ಕ್ರಾಸ್ ಬಳಿಯ ಬೂದಿಕಣಿವೆವರೆಗೆ, ಪಟ್ಟಣದಿಂದ ಹರಗಿನದೋಣಿ, ತಿಮ್ಮಲಾಪುರ, ಏಳುಬೆಂಚಿ ರಸ್ತೆಯ ರೈಲ್ವೆ ಗೇಟ್‌ವರೆಗಿನ ಪ್ರದೇಶದವರೆಗೆ ನಿಷೇಧಾಜ್ಞೆ ಹೊರಡಿಸಲಾಗಿದೆ.
========
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net