ಶಿಕ್ಷಣದಿಂದ ಪ್ರಗತಿ ಹೊಂದಲು ಸಾಧ್ಯ

ಹಗರಿಬೊಮ್ಮನಹಳ್ಳಿ ತಾಲೂಕಿನ ಬೆಣ್ಣಿಕಲ್ಲು ಗ್ರಾಮದಲ್ಲಿ ಸ.ಹಿ.ಪ್ರಾ.ಶಾಲೆ ಶತಮಾನೋತ್ಸವದ ಸಮರೋಪ ಸಮಾರಂಭವನ್ನು ಮಾಜಿ ಸಚಿವ ಎನ್.ಎಂ.ನಬಿ ಉದ್ಘಾಟಿಸಿದರು. ಹಾಲಸ್ವಾಮಿ ಮಠದ ಹಾಲಸಿದ್ದೇಶ್ವರ ಸ್ವಾಮೀಜಿ, ರಾಜ್ಯ ರೈತ ಸಂಘದ ಕಾರ್ಯದರ್ಶಿ ವೀರಸಂಗಯ್ಯ, ಮುಖ್ಯಶಿಕ್ಷಕ ಹುಸೇನ್ ಸಾಬ್, ಕೆ.ವಿ.ಲೋಕೇಶ್, ಹೊಸ್ಕೇರಿ ಬಸವರಾಜ್ ಮತ್ತಿತರರು ಇದ್ದರು.
ಹಗರಿಬೊಮ್ಮನಹಳ್ಳಿ ತಾಲೂಕಿನ ಬೆಣ್ಣಿಕಲ್ಲು ಗ್ರಾಮದಲ್ಲಿ ಸ.ಹಿ.ಪ್ರಾ.ಶಾಲೆ ಶತಮಾನೋತ್ಸವದ ಸಮರೋಪ ಸಮಾರಂಭವನ್ನು ಮಾಜಿ ಸಚಿವ ಎನ್.ಎಂ.ನಬಿ ಉದ್ಘಾಟಿಸಿದರು. ಹಾಲಸ್ವಾಮಿ ಮಠದ ಹಾಲಸಿದ್ದೇಶ್ವರ ಸ್ವಾಮೀಜಿ, ರಾಜ್ಯ ರೈತ ಸಂಘದ ಕಾರ್ಯದರ್ಶಿ ವೀರಸಂಗಯ್ಯ, ಮುಖ್ಯಶಿಕ್ಷಕ ಹುಸೇನ್ ಸಾಬ್, ಕೆ.ವಿ.ಲೋಕೇಶ್, ಹೊಸ್ಕೇರಿ ಬಸವರಾಜ್ ಮತ್ತಿತರರು ಇದ್ದರು.
Published on
ಹಗರಿಬೊಮ್ಮನಹಳ್ಳಿ: ದೇಶದಲ್ಲಿ ಶಾಲೆಗಳು ಹಾಗೂ ನ್ಯಾಯಾಲಯಗಳಲ್ಲಿ ಮಾತ್ರ ಜಾತ್ಯತೀತ ಮನೋಭಾವನೆ ಕಾಣಬಹುದು ಎಂದು ಮಾಜಿ ಸಚಿವ ಎನ್.ಎಂ.ನಬಿ ಅಭಿಪ್ರಾಯಪಟ್ಟರು.
ಬೆಣ್ಣಿಕಲ್ಲು ಸ.ಹಿ.ಪ್ರಾ.ಶಾಲೆ ಶತಮಾನೋತ್ಸವ ಸಮಾರೋಪ ಸಮಾರಂಭದಲ್ಲಿ ಭಾನುವಾರ ಮಾತನಾಡಿ ದರು. ಈ ಹಿಂದೆ ಗುರುಕುಲ ಶಿಕ್ಷಣ ಪದ್ಧತಿಯಡಿ ಸಮಾನತೆಯ ಶಿಕ್ಷಣ ದೊರೆಯುತ್ತಿರಲಿಲ್ಲ. ಬ್ರಿಟಿಷರ ಆಡಳಿತದಲ್ಲೂ ಕಷ್ಟವಿತ್ತು. ಆದರೂ, ಈ ಗ್ರಾಮದಲ್ಲಿ ಶಾಲೆ ತೆರೆಯಲಾಗಿತ್ತು. ಶಿಕ್ಷಣದಲ್ಲಿ ಪ್ರಗತಿ ಸಾಧಿಸಿದ ದೇಶ ಮುಂದುವರಿದ ದೇಶವಾಗುತ್ತದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಪಟ್ಟಣದ ಹಾಲಸ್ವಾಮಿ ಮಠದ ಹಾಲಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಹಿಂದಿನ ಶಿಕ್ಷಣ ಪದ್ಧತಿ ಕಷ್ಟ ಮತ್ತು ಕಠಿಣವಾಗಿರುತಿತ್ತು. ಇಂದು ಎಲ್ಲ ಸೌಲಭ್ಯಗಳಿದ್ದರೂ ಮಕ್ಕಳಲ್ಲಿ ಅಧ್ಯಯನಾಸಕ್ತಿ ಕುಂಠಿತವಾಗುತ್ತಿರುವುದು ವಿಷಾದನೀಯ ಎಂದರು.
ರೈತಸಂಘದ ರಾಜ್ಯ ಕಾರ್ಯಾಧ್ಯಕ್ಷ ಜೆ.ಎಂ.ವೀರಸಂಗಯ್ಯ ಮಾತನಾಡಿ, ಇಂದಿನ ಶಿಕ್ಷಣದಲ್ಲಿ ಇಂಗ್ಲಿಷ್ ಕಲಿಕೆಗೆ ಪಾಲಕರು ಮಾರುಹೊಗಿದ್ದಾರೆ. ಇಂಗ್ಲೀಷ್ ಭಾಷೆ ಪರಿಚಯಿಸಿ, ಮಾತೃಭಾಷೆ ಕನ್ನಡ ಕಲಿಸಿ ಎಂದರು.
ಗ್ರಾಮದ ಶತಾಯುಷಿ ಬಂಗಾಳಿ ಕರಿಯಮ್ಮರನ್ನು ಸನ್ಮಾನಿಸಲಾಯಿತು. ಬಿಇಒ ಪ್ರಭಾಕರ್, ಬಿಸಿಯೂಟ ಯೋಜನೆ ಸಹಾಯಕ ನಿರ್ದೆಶಕ ರಾಜಕುಮಾರ್ ನಾಯ್ಕ, ಇಸಿಒ ಗುರುಬಸವರಾಜ, ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಹ್ಯಾಟಿ ಲೋಕಪ್ಪ, ಕಾರ್ಯದರ್ಶಿ ಕೊಟ್ರೇಶ, ಎಸ್.ಡಿ.ಎಂ.ಸಿ. ಅಧ್ಯಕ್ಷ ಗುರುಬಸವರಾಜ, ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸಹೀರಾ ಬಾನು, ಹರಣಿ ಸಂಸ್ಥೆ ಕಾರ್ಯದರ್ಶಿ ಕೊಟ್ರೇಶ, ಬಿಜೆಪಿ ತಾಲೂಕು ಅಧ್ಯಕ್ಷ ಪ್ರಕಾಶ, ಶತಮಾನೋತ್ಸವ ಸಮಿತಿ ಅಧ್ಯಕ್ಷ ಕೆ.ಕೊಟ್ರೇಶಪ್ಪ, ನಿಂಗಪ್ಪ, ಮಾಬುಸಾಬ್, ಎಚ್.ಪ್ರಕಾಶ, ಜ್ಯೋತೆಪ್ಪ, ಟಿ.ಹನುಮಂತಪ್ಪ, ಲಕ್ಷ್ಮಣ, ಅಹಮದ್ ಸಾಬ್, ಚಾರಿ ದುರುಗಪ್ಪ, ಕುರುಬರ ಬಸವರಾಜ, ರೇವಣ ಸಿದ್ದಪ್ಪ, ಪಿಡಿಒ ಚನ್ನನಾಯ್ಕ, ಡಿ.ಟಿ.ಲಕ್ಷ್ಮಣ, ಶಿಕ್ಷಕರಾದ ಪಿ.ಇಶಾಕ್, ಸರಳಾ, ದೀಪಾ, ರೇಷ್ಮಾ, ಮುದ್ದಿ ಗಂಗಮ್ಮ, ಪ್ರವೀಣ, ಹನುಮಂತಪ್ಪ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net