ಧರ್ಮ-ಸಂಸ್ಕೃತಿ ಪಸರಿಸುವ ಕಾರ್ಯಕ್ರಮ

ಹಗರಿಬೊಮ್ಮನಹಳ್ಳಿಯಲ್ಲಿ ಹಿಂದೂ ಸಮಾವೇಶದ ಸಿದ್ಧತೆ ಸಭೆಯಲ್ಲಿ ಸಮಾವೇಶ ವೇದಿಕೆ ಅಧ್ಯಕ್ಷ ಡಾ.ಬಂಡ್ರಿ ವಿಶ್ವನಾಥ ಮಾತನಾಡಿದರು. ಪ್ರಮುಖರಾದ ಹಾಲ್ದಾಳ್ ವಿಜಯಕುಮಾರ್, ಕನ್ನಿಹಳ್ಳಿ ಚಂದ್ರಶೇಖರ, ಈ.ಕೃಷ್ಣಮೂರ್ತಿ ಇತರರಿದ್ದರು.
ಹಗರಿಬೊಮ್ಮನಹಳ್ಳಿಯಲ್ಲಿ ಹಿಂದೂ ಸಮಾವೇಶದ ಸಿದ್ಧತೆ ಸಭೆಯಲ್ಲಿ ಸಮಾವೇಶ ವೇದಿಕೆ ಅಧ್ಯಕ್ಷ ಡಾ.ಬಂಡ್ರಿ ವಿಶ್ವನಾಥ ಮಾತನಾಡಿದರು. ಪ್ರಮುಖರಾದ ಹಾಲ್ದಾಳ್ ವಿಜಯಕುಮಾರ್, ಕನ್ನಿಹಳ್ಳಿ ಚಂದ್ರಶೇಖರ, ಈ.ಕೃಷ್ಣಮೂರ್ತಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವೇದಿಕೆ ಅಧ್ಯಕ್ಷ ಡಾ.ಬಂಡ್ರಿ ವಿಶ್ವನಾಥ ಹೇಳಿಕೆ
  • ಹಗರಿಬೊಮ್ಮನಹಳ್ಳಿ ಹಿಂದೂ ಸಮಾವೇಶ
ಹಗರಿಬೊಮ್ಮನಹಳ್ಳಿ: ಯುವಸಮೂಹಕ್ಕೆ ಹಿಂದೂ ಸಂಸ್ಕಾರ, ಸಂಸ್ಕೃತಿಗಳ ಬಗ್ಗೆ ಜಾಗೃತಿ ಮೂಡಿಸುವುದೇ ಹಿಂದೂ ಸಮಾವೇಶದ ಉದ್ದೇಶ ಎಂದು ಹಿಂದೂ ಸಮಾವೇಶ ವೇದಿಕೆ ಅಧ್ಯಕ್ಷ ಡಾ.ಬಂಡ್ರಿ ವಿಶ್ವನಾಥ ಹೇಳಿದರು.
ಪಟ್ಟಣದಲ್ಲಿ ಫೆ.7ರ ಸಂಜೆ ನಡೆಯುವ ಹಿಂದೂ ಸಮಾವೇಶದ ಸಿದ್ಧತಾ ಸಭೆಯಲ್ಲಿ ಶುಕ್ರವಾರ ಮಾತನಾಡಿದರು. ಹಿಂದೂ ಧರ್ಮದಲ್ಲಿರುವ ಸಹಸ್ರಾರು ಸಮುದಾಯಗಳು ಒಂದೇ ಗೂಡಿನಡಿ ಬರಬೇಕು ಎನ್ನುವ ಆಶಯದೊಂದಿಗೆ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಮಾವೇಶಕ್ಕೆ ದೇವಸ್ಥಾನ ಸಂವರ್ಧನಾ ಸಮಿತಿ ರಾಜ್ಯ ಸಂಯೋಜಕ ಬೆಂಗಳೂರಿನ ಮನೋಹರ ಮಠದ ಆಗಮಿಸಲಿದ್ದಾರೆ. ರಾಜಕೀಯೇತರ, ಜಾತ್ಯತೀತ ಸಮಾವೇಶ ಇದಾಗಿದ್ದು, ಪ್ರಚೋದನಾಕಾರಿ ಭಾಷಣಕ್ಕೆ ಅವಕಾಶವಿಲ್ಲ. ಈ ನಾಡಿನ ಧರ್ಮ, ಸಂಸ್ಕಾರ ಪಸರಿಸುವ ಕಾರ್ಯಕ್ರಮವಾಗಿದೆ ಎಂದರು.
ವಿಎಸ್‌ಎಸ್‌ಎನ್ ಅಧ್ಯಕ್ಷ ಕನ್ನಿಹಳ್ಳಿ ಚಂದ್ರಶೇಖರ ಮಾತನಾಡಿ, ಅಂದು ಮಧ್ಯಾಹ್ನ 2.30ಕ್ಕೆ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸುವ ಮೂಲಕ ನೀರಾವರಿ ಇಲಾಖೆ ಕಚೇರಿ ಆವರಣದಿಂದ ಮೆರವಣಿಗೆ ಆರಂಭವಾಗಲಿದ್ದು, ವಿವಿಧ ಕಲಾ ತಂಡಗಳು ಪಾಲ್ಗೊಳ್ಳಲಿವೆ ಎಂದು ತಿಳಿಸಿದರು.
ಪುರಸಭೆ ಸದಸ್ಯರಾದ ನವೀನ್ ಕುಮಾರ, ಜೋಗಿ ಹನುಮಂತಪ್ಪ, ಹಾಲ್ದಾಳ್ ವಿಜಯಕುಮಾರ್, ಬಿಜೆಪಿ ತಾಲೂಕು ಅಧ್ಯಕ್ಷ ಬೆಣಕಲ್ ಪ್ರಕಾಶ, ಪಿಎಲ್‌ಡಿ ಬ್ಯಾಂಕ್ ಮಾಜಿ ನಿರ್ದೇಶಕ ಈ.ಕೃಷ್ಣಮೂರ್ತಿ, ಪ್ರಮುಖರಾದ ರಮೇಶ ಬೆಲಂಕೊಂಡ, ವಿ.ಕನಕಪ್ಪ, ಡಾ.ಅಜ್ಜಯ್ಯ, ಕಾರ್ಯಕರ್ತರಾದ ರೊಟ್ಟಿ ಕೊಟ್ರಪ್ಪ, ಕೆ.ಎಂ.ಶಿವಕುಮಾರ, ಕರಿಬಸವರಾಜ ಬದಾಮಿ, ವೆಂಕೋಬಪ್ಪ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net