ರೈತರಿಗೆ ನಷ್ಟ ತಪ್ಪಿಸಲು ಖರೀದಿ ಕೇಂದ್ರ ಆರಂಭ

ಸಿರಗುಪ್ಪ ಎಪಿಎಂಸಿ ಎದುರು ಜೋಳ ಖರೀದಿ ಕೇಂದ್ರವನ್ನು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಚೊಕ್ಕಬಸವನಗೌಡ ಉದ್ಘಾಟಿಸಿದರು.
ಸಿರಗುಪ್ಪ ಎಪಿಎಂಸಿ ಎದುರು ಜೋಳ ಖರೀದಿ ಕೇಂದ್ರವನ್ನು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಚೊಕ್ಕಬಸವನಗೌಡ ಉದ್ಘಾಟಿಸಿದರು.
Published on
ಸಿರಗುಪ್ಪ: ಜೋಳ ಖರೀದಿ ಕೇಂದ್ರದಿಂದ ರೈತರಿಗೆ ಬೆಂಬಲ ಬೆಲೆ ಯೋಜನೆಯ ಲಾಭ ಸಿಗಲಿದ್ದು, ಈ ಮೂಲಕ ಆರ್ಥಿಕವಾಗಿ ಅನುಕೂಲವಾಗಲಿದೆ ಎಂದು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಚೊಕ್ಕ ಬಸವನಗೌಡ ಹೇಳಿದರು.
ಪಟ್ಟಣದ ಎಪಿಎಂಸಿ ಎದುರು ಜೋಳ ಖರೀದಿ ಕೇಂದ್ರ ಉದ್ಘಾಟಿಸಿ ಸೋಮವಾರ ಮಾತನಾಡಿದರು. ತಾಲೂಕಿನಲ್ಲಿ ರೈತರು ಅತಿ ಹೆಚ್ಚಿನ ಪ್ರಮಾಣದಲ್ಲಿ ಜೋಳ ಬೆಳೆಯುತ್ತಿದ್ದು, ರೈತರಿಗೆ ಸಮರ್ಪಕವಾಗಿ ಬೆಂಬಲ ಬೆಲೆ ದೊರೆಯಬೇಕೆಂಬ ದೃಷ್ಟಿಯಿಂದ ಜೋಳ ಖರೀದಿ ಕೇಂದ್ರ ಆರಂಭಿಸಲಾಗಿದೆ. ರೈತರು ಖರೀದಿ ಕೇಂದ್ರಕ್ಕೆ ಗುಣಮಟ್ಟದ ಜೋಳ ನೀಡುವ ಮೂಲಕ ಬೆಂಬಲ ಬೆಲೆ ಯೋಜನೆಯ ಲಾಭ ಪಡೆದುಕೊಳ್ಳಬೇಕು. ಮಾರುಕಟ್ಟೆಯಲ್ಲಿ ಬೆಲೆ ಕುಸಿದಾಗ ರೈತರಿಗೆ ಬೆಂಬಲ ಬೆಲೆ ಒದಗಿಸಿ ನಷ್ಟ ತಪ್ಪಿಸುವುದು ಜೋಳ ಖರೀದಿ ಕೇಂದ್ರದ ಮುಖ್ಯ ಉದ್ದೇಶವಾಗಿದೆ ಎಂದರು.
ಖರೀದಿ ಕೇಂದ್ರ ಅಧಿಕಾರಿ ವೈಜ್ಯನಾಥ್ ಪಾಟೀಲ್ ಮಾತನಾಡಿ, ಕೆ.ಬೆಳಗಲ್ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ವ್ಯಾಪ್ತಿಯ ಜೋಳ ಖರೀದಿ ಕೇಂದ್ರವನ್ನು ಸಿರಗುಪ್ಪ ನಗರದ ಎಪಿಎಂಸಿ ಎದುರು ಆರಂಭಿಸಲಾಗಿದೆ. ಮುಂಗಾರು ಹಂಗಾಮಿನ 40,493 ಕ್ವಿಂಟಾಲ್, ಹಿಂಗಾರು ಹಂಗಾಮಿನ 20,243 ಕ್ವಿಂಟಾಲ್ ಜೋಳ ಮಾರಾಟಕ್ಕೆ ರೈತರು ಹೆಸರು ನೋಂದಾಯಿಸಿದ್ದಾರೆ ಎಂದು ತಿಳಿಸಿದರು.
ಫುಡ್ ಗ್ರೇಡರ್ ಕಿರಣ್ ಕುಮಾರ್, ಆಹಾರ ನಿರೀಕ್ಷಕ ಮಹಾರುದ್ರಗೌಡ, ಕೆ.ಬೆಳಗಲ್ ಸೊಸೈಟಿ ಅಧ್ಯಕ್ಷ ಪಾಲಾಕ್ಷಿಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕರಿಬಸಪ್ಪ, ಸಿರಗುಪ್ಪ ನಂಬರ್ ಒನ್ ಸೊಸೈಟಿ ಅಧ್ಯಕ್ಷ ಟಿ.ನಾಂಚರಯ್ಯ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಹೆರಕಲ್ ಜಡೇಸ್ವಾಮಿ, ಖರೀದಿ ಅಧಿಕಾರಿ ವೈಜನಾಥ್ ಪಾಟೀಲ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net