ರಾಗಿ ಖರೀದಿ ಕೇಂದ್ರದಲ್ಲಿ ಅಕ್ರಮ ತಡೆಯಿರಿ

ಹರಪನಹಳ್ಳಿಯಲ್ಲಿ ತಹಸೀಲ್ದಾರ್ ಬಿ.ವಿ.ಗಿರೀಶ್ ಬಾಬುಗೆ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯಿಂದ ಮನವಿ ಸಲ್ಲಿಸಲಾಯಿತು. ಎಚ್.ಹನುಮಂತಪ್ಪ, ವಹಾಂತೇಶ್, ಡಿ.ಕೆಂಚಪ್ಪ, ಅಂಜಿನಪ್ಪ, ಕೋಡಿಹಳ್ಳಿ ಮಲ್ಲಿಕಾರ್ಜುನ, ಕನ್ನವಳ್ಳಿ ಸುರೇಶ, ಹುಲಿಕಟ್ಟಿ ಮಂಜುನಾಥ, ಕುದುರಿ ನಾಗರಾಜ, ಪ್ರಭು ಶೃಂಗಾರತೋಟ, ಗಂಗಾನಾಯ್ಕ, ಕಾಳ್ಯಾ ನಾಯ್ಕ, ಮಹಮ್ಮದ್ ರಫಿ ಇತರರಿದ್ದರು.

Published on
ಹರಪನಹಳ್ಳಿ: ನಗರದ ಕೃಷಿ ಮಾರುಕಟ್ಟೆ ಯಲ್ಲಿರುವ ರಾಗಿ ಖರೀದಿ ಕೇಂದ್ರದಲ್ಲಿ ಪ್ರತಿ ಕ್ವಿಂಟಾಲ್‌ಗೆ ಮೂರು ಕೆಜಿ ರಾಗಿಯನ್ನು ಅಕ್ರಮವಾಗಿ ತೆಗೆದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಯಿಂದ ತಹಸೀಲ್ದಾರ್ ಬಿ.ವಿ.ಗಿರೀಶ್ ಬಾಬುಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ಸಾಮಾಜಿಕ ಕಾರ್ಯಕರ್ತ ಎಚ್.ಹನುಮಂತಪ್ಪ ಮಾತನಾಡಿ, ಸರ್ಕಾರ ಖಾಸಗಿ ಏಜೆನ್ಸಿಗೆ ರಾಗಿ ಖರೀದಿ ಕೇಂದ್ರವನ್ನು ವಹಿಸಿದ್ದು, ಏಜೆನ್ಸಿಯ ಬಸವರಾಜ್ ಮತ್ತು ಗೋವಿಂದ ನಾಯಕ್ ಅವರು ಸರ್ಕಾರ ನಿಗದಿ ಪಡಿಸಿದ್ದಕ್ಕಿಂತ ಹೆಚ್ಚಿನ ರಾಗಿಯನ್ನು ತೂಕ ಮಾಡುತ್ತಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗೂ ದೂರು ಸಲ್ಲಿಸಬಹುದು. ನಮಗೆ ಯಾರ ಭಯ ಇಲ್ಲ ಎಂದು ಬಸವರಾಜ ಮಾತನಾಡುತ್ತಿದ್ದಾರೆ ಎಂದು ದೂರಿದರು.
ನಿರ್ಭಿತಿಯಿಂದ ಅಕ್ರಮ ದಂಧೆಯಲ್ಲಿ ತೊಡಗಿರುವ ಏಜೆನ್ಸಿ ಪರವಾನಗಿಯನ್ನು ಕೂಡಲೇ ರದ್ದುಪಡಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಈವರೆಗೆ ಅಕ್ರಮವಾಗಿ ಪಡೆದ ರಾಗಿ ತೂಕಕ್ಕೆ ನಿಗದಿತ ಮೊತ್ತವನ್ನು ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು. ರಾಗಿ ಖರೀದಿ ಕೇಂದ್ರದಲ್ಲಿ ಅಕ್ರಮ ತಡೆಯಲು ಸಿಸಿ ಕ್ಯಾಮರಾ ಅಳವಡಿಸಬೇಕು ಎಂದು ಆಗ್ರಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net