ಸಿರಿಗೇರಿ: ಮುಂಗಾರು ಮಳೆ ಕೈಕೊಟ್ಟಿರುವುದರಿಂದ ರೈತರು ಕಂಗಾಲಾಗಿದ್ದು, ನಗರಗಳಿಗೆ ಗುಳೆ ಹೊರಟಿದ್ದಾರೆ. ಜಮೀನಿನಲ್ಲಿ ಬಿತ್ತನೆ ಮಾಡಿರುವ ಬೀಜ ಮೊಳಕೆಯೊಡೆದಿಲ್ಲ. .ಇದರಿಂದಾಗಿ ಮಳೆಗಾಗಿ ಪ್ರಾರ್ಥಿಸಿ ಸುನ್ನಿ ಜಾಮಿಯಾ ಮಸೀದಿಯಲ್ಲಿ ಮುಸ್ಲಿಮರು ಬುಧವಾರ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮುತುವಲ್ಲಿ ಖಾದರ್ ಬಾಷಾ, ಮೊಹಮ್ಮದ್ ರಫೀಕ್, ಬೆನ್ನೂರು ಅನ್ವರ್ ಬಾಷಾ, ಚಾಂದ್ ಬಾಷಾ, ಬೆನ್ನೂರು ಇಸ್ಮಾಯಿಲ್, ಕೊಲ್ಮಿ ನಬಿಸಾಬ್, ಜಾಕಿರ್ ಸಾಬ್ ಮತ್ತಿತರರಿದ್ದರು.