ವಿದ್ಯುತ್ ಕ್ಷೇತ್ರ ಖಾಸಗೀಕರಣ ಸಲ್ಲ

ಖಾಸಗೀಕರಣ ವಿರೋಧಿಸಿ ಹರಪನಹಳ್ಳಿ ಬೆಸ್ಕಾಂ ಎಇಇ ಕಚೇರಿ ಮುಂದೆ ಇಲಾಖೆ ನೌಕರರು ಪ್ರತಿಭಟನೆ ನಡೆಸಿದರು. ಎಇಇ ಪ್ರಕಾಶ ಪತ್ತೆನೂರು, ಎಇಗಳಾದ ಮಾರುತೇಶ ಕೆ., ಬಸವರಾಜ ಕೆ.ಎಂ., ಇಂದಿರಾ ಎಸ್., ಜೆಇ ವಿನಾಯಕ, ಬೆಸ್ಕಾಂ ನೌಕರರ ಸಂಘದ ತಾಲೂಕು ಅಧ್ಯಕ್ಷ ವೀರಣ್ಣ ಎಂ. ಇತರರಿದ್ದರು.
ಖಾಸಗೀಕರಣ ವಿರೋಧಿಸಿ ಹರಪನಹಳ್ಳಿ ಬೆಸ್ಕಾಂ ಎಇಇ ಕಚೇರಿ ಮುಂದೆ ಇಲಾಖೆ ನೌಕರರು ಪ್ರತಿಭಟನೆ ನಡೆಸಿದರು. ಎಇಇ ಪ್ರಕಾಶ ಪತ್ತೆನೂರು, ಎಇಗಳಾದ ಮಾರುತೇಶ ಕೆ., ಬಸವರಾಜ ಕೆ.ಎಂ., ಇಂದಿರಾ ಎಸ್., ಜೆಇ ವಿನಾಯಕ, ಬೆಸ್ಕಾಂ ನೌಕರರ ಸಂಘದ ತಾಲೂಕು ಅಧ್ಯಕ್ಷ ವೀರಣ್ಣ ಎಂ. ಇತರರಿದ್ದರು.
Published on
ಹರಪನಹಳ್ಳಿ: ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ಬೆಸ್ಕಾಂ ಎಇಇ ಕಚೇರಿ ಮುಂದೆ ಇಲಾಖೆ ನೌಕರರು ಗುರುವಾರ ಪ್ರತಿಭಟನೆ ನಡೆಸಿದರು.

ಬೆಸ್ಕಾಂ ಎಇ ಮಾರುತೇಶ ಕೆ. ಮಾತನಾಡಿ, ವಿದ್ಯುತ್ ಕ್ಷೇತ್ರ ಖಾಸಗೀಕರಣ ಮಾಡಬಾರದು. ವಿದ್ಯುತ್ ವಿತರಣಾ ಚಟುವಟಿಕೆಗಳ ಪರವಾನಗಿಯನ್ನು ಖಾಸಗಿ ಕಂಪನಿಗೆ ನೀಡಬಾರದು. ಸರ್ಕಾರದ ಅಧೀನದಲ್ಲಿರುವ ವಿದ್ಯುತ್ ವಿತರಣಾ ಕ್ಷೇತ್ರವನ್ನು ಟಾಟಾ ಪವರ್ ಕಂಪನಿಗೆ ನೀಡುವ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ.

ಅಲ್ಲದೇ ಅಕ್ಷೇಪಣೆಯನ್ನೂ ಅಹ್ವಾನಿಸಲಾಗಿದೆ. ಖಾಸಗೀಕರಣದಿಂದ ಗ್ರಾಹಕರಿಗೆ ವಿದ್ಯುತ್ ವಿತರಣೆ, ದರ, ನಿರ್ವಹಣೆ ಎಲ್ಲದರ ಮೇಲೂ ತೀವ್ರ ತರಹದ ಹೊರೆ ಹಾಗೂ ಒತ್ತಡಗಳು ಬೀಳಲಿವೆ. ಸರ್ಕಾರದ ಅಧೀನದಲ್ಲಿ ಕೆಲಸ ಮಾಡುತ್ತಿರುವ ನಾವು ಹೆಚ್ಚಿನ ರೀತಿಯಲ್ಲಿ ಮುತುವರ್ಜಿವಹಿಸಿ ಇಲಾಖೆಯ ನಷ್ಟದ ಪ್ರಮಾಣವನ್ನು ತಗ್ಗಿಸಲು ಶ್ರಮಿಸುತ್ತಿದ್ದೇವೆ. ಗ್ರಾಹಕರು ಆಕ್ಷೇಪಣೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಲ್ಲಿಸಬೇಕು ಎಂದರು.

ಜೆಇ ಕೊಟ್ರಪ್ಪ ಕೆ. ಮಾತನಾಡಿ, ವಿದ್ಯುತ್ ಕ್ಷೇತ್ರ ಶೇ.50ಕ್ಕೂ ಹೆಚ್ಚು ಪ್ರಮಾಣದಲ್ಲಿ ಖಾಸಗೀಕರಣವಾಗುತ್ತಿದೆ. ಟಾಟಾ ಕಂಪನಿಗೆ ವಿದ್ಯುತ್ ಕ್ಷೇತ್ರ ಕೊಟ್ಟರೆ ಸಿಬ್ಬಂದಿ ಹಾಗೂ ಅವರ ಕುಟುಂಬದವರು, ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದರು.

ಬೆಸ್ಕಾಂ ನೌಕರರ ಸಂಘದ ತಾಲೂಕು ಅಧ್ಯಕ್ಷ ವೀರಣ್ಣ ಎಂ. ಮಾತನಾಡಿ, ವಿಮಾನ ನಿಲ್ದಾಣಗಳು, ರೈಲು, ಶಿಕ್ಷಣ, ಸಂಚಾರ ಹೀಗೆ ಎಲ್ಲ ಕ್ಷೇತ್ರಗಳು ಖಾಸಗೀಕರಣವಾದರೆ ಸೇವಾ ಮನೋಭಾವ ಉಳಿಯುವುದಿಲ್ಲ. ದೀನ-ದಲಿತರು, ಬಡವರಿಗೆ ದೊರೆಯುತ್ತಿರುವ ಗಂಗಾ ಕಲ್ಯಾಣ, ಗೃಹಜ್ಯೋತಿ ಯೋಜನೆಗಳಿಗೆ ಸಂಚಕಾರ ಒದಗಲಿದೆ. ರೈತರ ಕೊಳವೆ ಬಾವಿಗಳಿಗೂ ವಿದ್ಯುತ್ ಸಿಗದ ಪರಿಸ್ಥಿತಿ ಎದುರಾಗುತ್ತದೆ. ಖಾಸಗಿ ವಲಯಗಳು ಲಾಭದ ದೃಷ್ಟಿಯಿಂದ ವಿದ್ಯುತ್ ಕ್ಷೇತ್ರವನ್ನು ಕಬಳಿಸಲು ಹೊಂಚು ಹಾಕುತ್ತಿವೆ. ನಾವು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ವಿದ್ಯುತ್ ದುಬಾರಿಯಾಗಿ ಎಲ್ಲರಿಗೂ ಹೊರೆಯಾಗುತ್ತದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net