ಸಿರಿಗೇರಿಯಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ

ಸಿರಿಗೆರೆ ಕಾಸ್‌ನಲ್ಲಿ ಜೆಸ್ಕಾಂ ಸಿಬ್ಬಂದಿ ವಿದ್ಯುತ್ ಪರಿವರ್ತಕ ಸರಿಪಡಿಸುತ್ತಿರುವುದು.
ಸಿರಿಗೆರೆ ಕಾಸ್‌ನಲ್ಲಿ ಜೆಸ್ಕಾಂ ಸಿಬ್ಬಂದಿ ವಿದ್ಯುತ್ ಪರಿವರ್ತಕ ಸರಿಪಡಿಸುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ದೈನಂದಿನ ಜೀವನ ನಿರ್ವಹಣೆಗೆ ತೊಂದರೆ

ಸಿರಿಗೇರಿ:

ಗ್ರಾಮದಲ್ಲಿ ಹಲವು ತಿಂಗಳಿಂದ ವಿದ್ಯುತ್ ಕಣ್ಣಾಮುಚ್ಚಾಲೆ ಆಡುತ್ತಿದ್ದರೂ ಜೆಸ್ಕಾಂ ಕ್ರಮಕ್ಕೆ ಮುಂದಾಗುತ್ತಿಲ್ಲವೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಗ್ರಾಮದಿಂದ 8 ಕಿ.ಮೀ. ದೂರದ ಸಿರಿಗೇರಿ ಕ್ರಾಸ್‌ನಲ್ಲಿ 110 ಕೆ.ವಿ. ಪವರ್ ಸ್ಟೇಷನ್ ಸ್ಥಾಪಿಸಿದ್ದು, ಇಲ್ಲಿಂದಲೇ ವಿದ್ಯುತ್ ಒದಗಿಸುವ ಅನಿವಾರ್ಯತೆ ಇದೆ. ಸ್ಪಲ್ಪ ಮಳೆ-ಗಾಳಿ ಬೀಸಿದರೂ ವಿದ್ಯುತ್ ಕಡಿತವಾಗುತ್ತಿದೆ. ದಿನದ 24 ಗಂಟೆಯಲ್ಲಿ 10ರಿಂದ15 ಬಾರಿ ವಿದ್ಯುತ್ ಕಡಿತಗೊಳ್ಳುತ್ತದೆ. ಇದರಿಂದ ಕೃಷಿ ಹಾಗೂ ಕುಡಿವ ನೀರಿನ ಪಂಪ್‌ಸೆಟ್, ಹಿಟ್ಟಿನ ಕಿರಣಿ, ಮನೆಯ ದೈನಂದಿನ ಬಳಕೆ ಹಾಗೂ ವಿದ್ಯಾರ್ಥಿಗಳ ಅಭ್ಯಾಸಕ್ಕೆ ಬಹಳ ತೊಂದರೆಯಾಗಿದೆ. ರಾತ್ರಿ ವೇಳೆಯೇ ವಿದ್ಯುತ್ ಕಡಿತಗೊಳ್ಳುವುದರಿಂದ ವಿಷ ಜಂತುಗಳ ಕಾಟಕ್ಕೆ ಮನೆಯಿಂದ ಹೊರೆಗೆ ಹೋಗದಾಗಿದೆ. ರಾತ್ರಿ ಇಡೀ ಸೊಳ್ಳೆ ಕಡಿಸಿಕೊಂಡು ಮಲಗುವ ಪರಿಸ್ಥಿತಿ ಇದೆ. ಕೂಡಲೇ ನಿರಂತರ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳದಿದ್ದರೆ ಸಿರಿಗೇರಿ ಕ್ರಾಸ್ ಕೆಇಬಿ ಮುಂದೆ ಧರಣಿ ನಡೆಸುವುದಾಗಿ ಎಚ್ಚರಿಸಿದ್ದಾರೆ.
"

ಮಳೆಗಾಲ ಕಾರಣ ಗಾಳಿ ಅಧಿಕವಾಗಿದ್ದು ವಿದ್ಯುತ್ ಲೈನ್ ಜಂಪಾಗಿ ಕರೆಂಟ್ ಕಟ್ಟಾಗುತ್ತಿದೆ. ಈಗಾಗಲೇ ಹಳೇ ಕಂಬಗಳನ್ನು ತೆರೆವುಗೊಳಿಸಿ ಹೊಸದಾಗಿ ಹಾಕಲಾಗುತ್ತಿದೆ. ಅರಣ್ಯ ಇಲಾಖೆ ಅನುಮತಿ ನೀಡಿದರೆ ಸಿರಿಗೇರಿಗೆ ಪ್ರತ್ಯೇಕವಾಗಿ ವಿದ್ಯುತ್ ಮಾರ್ಗ ಒದಗಿಸಿಕೊಡಲಾಗುವುದು. ಸದ್ಯ ತಾಂತ್ರಿಕ ತೊಂದರೆಗಳಿಂದ ವಿದ್ಯುತ್ ಟ್ರಿಪ್ ಆಗುತ್ತಿದ್ದು, ಶೀಘ್ರವೇ ಪರಿಹರಿಸಲಾಗುವುದು.

— ಶೇಕ್ಷಾವಲಿ ಜೆಇ, 110 ಕೆ.ವಿ. ಪವರ್ ಸ್ಟೇಷನ್, ಸಿರಿಗೇರಿ ಕ್ರಾಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net