ಕಾರಣ ಹೇಳದೆ ತಳಕಲ್ಲು ಕೆರೆಗೆ ನೀರು ಹರಿಸಿ

ಹೂವಿನಹಡಗಲಿ ಸಿಂಗಟಾಲೂರು ಏತ ನೀರಾವರಿ ಯೋಜನೆ ಉಪ ವಿಭಾಗ ಕಚೇರಿ ಮುಂದೆ ಶನಿವಾರ ರೈತರು ಪ್ರತಿಭಟನೆ ನಡೆಸಿದರು. ತಳಕಲ್ಲು ಕೆರೆ ಹೋರಾಟ ಸಮಿತಿ ತಾಲೂಕು ಅಧ್ಯಕ್ಷೆ ಎಂ.ಪಿ.ಸುಮಾ ವಿಜಯ್, ಕಾರ್ಯದರ್ಶಿಗಳಾದ ಜಿ.ರಾಮನಗೌಡ, ಕುಂಚೂರು ಸತೀಶ, ಎಸ್.ಚಂದ್ರಪ್ಪ, ವಸಂತ ಕುಮಾರ್ ಇತರರಿದ್ದರು.
ಹೂವಿನಹಡಗಲಿ ಸಿಂಗಟಾಲೂರು ಏತ ನೀರಾವರಿ ಯೋಜನೆ ಉಪ ವಿಭಾಗ ಕಚೇರಿ ಮುಂದೆ ಶನಿವಾರ ರೈತರು ಪ್ರತಿಭಟನೆ ನಡೆಸಿದರು. ತಳಕಲ್ಲು ಕೆರೆ ಹೋರಾಟ ಸಮಿತಿ ತಾಲೂಕು ಅಧ್ಯಕ್ಷೆ ಎಂ.ಪಿ.ಸುಮಾ ವಿಜಯ್, ಕಾರ್ಯದರ್ಶಿಗಳಾದ ಜಿ.ರಾಮನಗೌಡ, ಕುಂಚೂರು ಸತೀಶ, ಎಸ್.ಚಂದ್ರಪ್ಪ, ವಸಂತ ಕುಮಾರ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಹೋರಾಟ ಸಮಿತಿ ಒತ್ತಾಯ
  • ಹೂವಿನಹಡಗಲಿ ಏತ ನೀರಾವರಿ ಕಚೇರಿ ಮುಂದೆ ಪ್ರತಿಭಟನೆ
ಹೂವಿನಹಡಗಲಿ:

ತಳಕಲ್ಲು ಕೆರೆ ಭರ್ತಿಗೆ ಆಗ್ರಹಿಸಿ ತಳಕಲ್ಲು ಕೆರೆ ಹೋರಾಟ ಸಮಿತಿ ನೇತೃತ್ವದಲ್ಲಿ ರೈತರು ಸಿಂಗಟಾಲೂರು ಏತ ನೀರಾವರಿ ಯೋಜನೆ ಉಪ ವಿಭಾಗ ಕಚೇರಿ ಮುಂದೆ ಶನಿವಾರ ಪ್ರತಿಭಟನೆ ನಡೆಸಿದರು.

ಸಮಿತಿ ತಾಲೂಕು ಅಧ್ಯಕ್ಷೆ ಎಂ.ಪಿ. ಸುಮಾ ವಿಜಯ್ ಮಾತನಾಡಿ, ಕೂಡ್ಲಿಗಿ ತಾಲೂಕಿನ 74 ಕೆರೆಗಳಿಗೆ ಹಾಗೂ ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲ್ವಿ ಜಲಾಶಯಕ್ಕೆ ತುಂಗಭದ್ರಾ ನದಿಯಿಂದ ನೀರು ಹರಿಸಲಾಗುತ್ತಿದೆ. ಆದರೆ ಹತ್ತಿರದಲ್ಲಿಯೇ ಇರುವ ತಳಕಲ್ಲು ಕೆರೆಗೆ ನೀರು ತುಂಬಿಸಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಈ ಹಿಂದೆ ಸರ್ಕಾರ ಮಟ್ಟದಲ್ಲಿ ಹೋರಾಟ ಮಾಡಿ ಹೆಚ್ಚುವರಿ ಮೋಟಾರ್, ಎಕ್ಸ್‌ಪ್ರೆಸ್ ಲೈನ್ ವ್ಯವಸ್ಥೆ ಮಾಡಿಸಿದ್ದೇವೆ. ಅಧಿಕಾರಿಗಲು ಯಾವುದೇ ಕಾರಣ ಹೇಳದೆ ನೀರು ಹರಿಸಬೇಕೆಂದು ಆಗ್ರಹಿಸಿದರು.
ಸಿಂಗಟಾಲೂರು ಯೋಜನ ವಿಭಾಗದ ಎಇಇ ಶಿವಮೂರ್ತಿ ಮಾತನಾಡಿ, ಕೆರೆಗೆ ನೀರು ತುಂಬಿಸುವ ವ್ಯವಸ್ಥೆಯ ಏರ್‌ವಾಲ್ವ್ ಮತ್ತು ಪೈಪ್‌ಗಳಲ್ಲಿ ರಂಧ್ರ ಬಿದ್ದು ನೀರು ಪೋಲಾಗುತ್ತಿದೆ. ಅದನ್ನು ದುರಸ್ತಿಗೊಳಿಸಿ ನೀರು ಹರಿಸುವ ಭರವಸೆ ನೀಡಿದರು. ಸಮಿತಿ ಕಾರ್ಯದರ್ಶಿಗಳಾದ ಜಿ.ರಾಮನಗೌಡ, ಕುಂಚೂರು ಸತೀಶ, ಎಸ್.ಚಂದ್ರಪ್ಪ, ವಸಂತ ಕುಮಾರ್, ಸದಸ್ಯರಾದ ಕೆ.ಪಿ.ನಾಗರಾಜ, ಟಿ.ನಾಗರಾಜ, ಮಂಜಪ್ಪ, ಅಜ್ಜಪ್ಪ, ಎಂ.ಚನ್ನಬಸಪ್ಪ, ಎಂ.ಚಂದ್ರಶೇಖರ, ಬಿ.ಸಿದ್ದಪ್ಪ, ನಿಂಗಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net