ಕಂಪ್ಲಿ ಮಹಿಳಾ ಮೀಸಲು ಕ್ಷೇತ್ರವಾಗುವ ಸಾಧ್ಯತೆ

ಕಂಪ್ಲಿಯಲ್ಲಿ ಮೂರು ಕೋಟಿ ರೂ, ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಜೆ.ಎನ್.ಗಣೇಶ್ ಭೂಮಿಪೂಜೆ ನೆರವೇರಿಸಿದರು.
ಕಂಪ್ಲಿಯಲ್ಲಿ ಮೂರು ಕೋಟಿ ರೂ, ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಜೆ.ಎನ್.ಗಣೇಶ್ ಭೂಮಿಪೂಜೆ ನೆರವೇರಿಸಿದರು.
Published on
ಕಂಪ್ಲಿ: ಪಟ್ಟಣದ ಷಾ.ಮಿಯಾಚಂದ್ ಸರ್ಕಾರಿ ಹೈಸ್ಕೂಲ್ ಕಟ್ಟಡವನ್ನು ತೆರವುಗೊಳಿಸದೆ ನವೀಕರಿಸಲಾಗುವುದು ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.
ಸಣಾಪುರದಲ್ಲಿ ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿ ಸೋಮವಾರ ಮಾತನಾಡಿದರು. ಹೈಸ್ಕೂಲ್ ಕಟ್ಟಡದ ಹಾಳಾಗಿರುವ ಛಾವಣಿ ದುರಸ್ತಿಗೊಳಿಸಲಾಗುವುದು. ಕಂಪ್ಲಿ ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳಾ ಮತದಾರರು ಹೆಚ್ಚಿರುವುದರಿಂದ ಮಹಿಳಾ ಮೀಸಲು ಕ್ಷೇತ್ರವಾಗುವ ಸಂಭವವವಿದೆ. ಸಾಮಾನ್ಯ ಮಹಿಳಾ ಮೀಸಲು ಕ್ಷೇತ್ರವಾದರೂ ನಮ್ಮ ಕುಟುಂಬದವರನ್ನು ಹೊರತುಪಡಿಸಿ ಅರ್ಹ ಮಹಿಳೆಯನ್ನು ನಿಲ್ಲಿಸಿ ಗೆಲ್ಲಿಸಲಾಗುವುದು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಶ್ರೀನಿವಾಸರಾವ್, ಎಪಿಎಂಸಿ ಅಧ್ಯಕ್ಷ ಎನ್.ಹಬೀಬ್ ರೆಹಮಾನ್, ಪ್ರಮುಖರಾದ ಕೆ.ಎಸ್.ಚಾಂದ್ ಬಾಷ, ಕೆ.ಮಸ್ತಾನ್, ಬಿ.ಸಿದ್ದಪ್ಪ, ಜಿ.ರಾಮಣ್ಣ, ಬಿ.ನಾರಾಯಣಪ್ಪ, ಎಲ್.ರಾಮನಾಯ್ಡು, ಲಡ್ಡು ಹೊನ್ನೂರವಲಿ, ಹೊನ್ನೂರಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net