ಸಿರಿಗೇರಿಯಲ್ಲಿ ಪೊರುಗುಡ್ಡ ಪೂಜೆ

ಮಳೆಗಾಗಿ ಪ್ರಾರ್ಥಿಸಿ ಸಿರಿಗೇರಿಯಲ್ಲಿ ತುಂಬಿದ ಬಿಂದಿಗೆಯಲ್ಲಿ ಪತ್ರಿ ಇಟ್ಟು ಪ್ರಾರ್ಥನೆ ಸಲ್ಲಿಸಲಾಯಿತು.
ಮಳೆಗಾಗಿ ಪ್ರಾರ್ಥಿಸಿ ಸಿರಿಗೇರಿಯಲ್ಲಿ ತುಂಬಿದ ಬಿಂದಿಗೆಯಲ್ಲಿ ಪತ್ರಿ ಇಟ್ಟು ಪ್ರಾರ್ಥನೆ ಸಲ್ಲಿಸಲಾಯಿತು.
Published on
ಸಿರಿಗೇರಿ: ಮುಂಗಾರು ಮಳೆ ಮುನಿಸಿನಿಂದಾಗಿ ರೈತರಲ್ಲಿ ಆತಂಕ ಮೂಡಿದೆ.
ಇದರಿಂದಾಗಿ ಗ್ರಾಮೀಣ ಭಾಗದಲ್ಲಿ ಮಳೆರಾಯನಿಗಾಗಿ ಪ್ರಾರ್ಥಿಸಿ ವಿಶೇಷ ಪೂಜೆ, ಅಭಿಷೇಕ, ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಗ್ರಾಮದ ಹಳ್ಳಿಮರದ ಓಣಿ, ಗುಡಟ್ಟಿಯವರ ಓಣಿ, ಬಿಚ್ಚುಗತ್ತಿಯವರ ಓಣಿ, ತಾತನಕಟ್ಟೆ ಓಣಿಯ ಮಹಿಳೆಯರಯ ತುಂಬಿದ ಬಿಂದಿಗೆಯಲ್ಲಿ ಪತ್ರಿ ಇಟ್ಟು, ಮಳೆರಾಯನಿಗಾಗಿ ಪ್ರಾರ್ಥಿಸಿದರು. ಪೋರಗುಡ್ಡದಲ್ಲಿ ವಿಶೇಷ ಪ್ರಾರ್ಥನೆ ಕೈಗೊಂಡರು.
ಕಲ್ಗುಡಿ ಶಾಂತಮ್ಮ, ಬಡಕನಾಯಕರ ಮುದುಕಮ್ಮ, ಬಿಚ್ಚುಗತ್ತಿ ಶಾಂತಮ್ಮ, ಗುಡಟ್ಟಿ ಹನುಮಂತಮ್ಮ, ಹಳ್ಳಿಮರದ ಈರಮ್ಮ. ಚಾನಾಳ್ ಯಲ್ಲಮ್ಮ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net