ಬಾಕ್ಸ್ : ರಾಜಕೀಯ ಮುಖಂಡರ ಬೆಂಬಲಿತದಿಂದ ಕಳೆದ ಕೆಲ ವರ್ಷಗಳಿಂದ ಪಾರಿವಾಳ ಬೆಟ್ಟಿಂಗ್, ಜೂಜಾಟ ಹಾಗೂ ಮಟ್ಕಾ ಸೇರಿದಂತೆ ಕೆಲವೊಂದು ಅಕ್ರಮ ಚಟುವಟಿಕೆಗಳು ಮೇಲಧಿಕಾರಿಗಳ ಗಮನಕ್ಕೆಯಿದ್ದರೂ ನಡೆಯುತ್ತಿತ್ತು. ಕಳೆದ ನಾಲ್ಕೂವರೆ ತಿಂಗಳಿಂದ ಎಗ್ಗಿಲ್ಲದೆ ಸಾಗುತ್ತಿದ್ದ ಮಟ್ಕಾ, ಗಾಂಜಾ , ಜೂಜಾಟ ಹಾಗೂ ಬೆಟ್ಟಿಂಗ್ ಕಡಿವಾಣಕ್ಕೆ ನಿಯಂತ್ರಣ ಹಾಕುವಲ್ಲಿ ಎಸ್ಪಿ ಡಾ. ಸುಮನ್ ಡಿ. ಪನ್ನೇಕರ್ ಯಶ್ವಸಿಯಾಗಿದ್ದಾರೆ ಎಂಬುದಾಗಿ ಜನರ ಅಭಿಪ್ರಾಯವಾಗಿದೆ. ಇದಲ್ಲದೇ, ನಗರದ ನಾನಾ ವೃತ್ತಗಳ ರಸ್ತೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಸರಿಪಡಿಸುವಲ್ಲಿ ಮುಂದಾಗಿದ್ದಾರೆ.